ಸ್ತನ ಕ್ಯಾನ್ಸರ್ನಿಂದ ಕಿರುತೆರೆ ನಟಿ ಕಮಲಶ್ರೀ ನಿಧನ
‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಕಥಾ ನಾಯಕ ವೇದಾಂತ್ ಅವರ ಅಜ್ಜಿ ಪಾತ್ರದಲ್ಲಿ ಕಮಲಶ್ರೀ ಅವರು ನಟಿಸಿದ್ದರು. ಅವರ ಪಾತ್ರ ಸಾಕಷ್ಟು ಇಷ್ಟ ಆಗಿತ್ತು. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಅವರು ಈಗ ನಮ್ಮನ್ನು ಅಗಲಿದ್ದಾರೆ. ಈ ಸಾವು ನೋವು ತಂದಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ಗಟ್ಟಿಮೇಳ’ ಧಾರಾವಾಹಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದೆ ಕಮಲಶ್ರೀ ಅವರು ನಿಧನ ಹೊಂದಿದ್ದಾರೆ. ಅವರಿಗೆ ವಯಸ್ಸು 70 ವರ್ಷ ಮೇಲ್ಪಟ್ಟಿತ್ತು. ಅವರ ನಿಧನವು ಕಿರುತೆರೆ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕಮಲಶ್ರೀ ಅವರು ಕಳೆದ ಕೆಲ ವರ್ಷಗಳಿಂದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅದರಿಂದ ಚೇತರಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಅನಾರೋಗ್ಯದ ಬಳಿಕ ಧಾರಾವಾಹಿಗಳಲ್ಲಿ ನಟಿಸಲು ಅವರಿಂದ ಸಾಧ್ಯವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 01, 2025 07:27 AM
