ಕಾಟೇರ: ದರ್ಶನ್ ಕೈಯಲ್ಲಿರುವ ಮಚ್ಚಿನ ಗುಟ್ಟೇನು? ರಟ್ಟು ಮಾಡಿದ ಶ್ರುತಿ

Updated on: Dec 14, 2023 | 11:46 PM

Katera: ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರುತಿ, ‘ಕಾಟೇರ’ ಪೋಸ್ಟರ್​ನಲ್ಲಿ ಹೆಸರಿನ ನಡುವೆ ಮಚ್ಚು ಏಕಿದೆ ಎಂಬ ಬಗ್ಗೆ ಸೂಚ್ಯವಾಗಿ ಮಾತನಾಡಿದರು.

ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾದ ಸುದ್ದಿಗೋಷ್ಠಿ ಇಂದು (ಡಿಸೆಂಬರ್ 14) ಬೆಂಗಳೂರಿನಲ್ಲಿ ನಡೆಯಿತು. ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್, ನಾಯಕಿ ರಾಧನಾ, ಹಿರಿಯ ನಟರಾದ ಅವಿನಾಶ್, ಶ್ರುತಿ, ಕುಮಾರ್ ಗೋವಿಂದು, ಬಿರಾದರ ಸೇರಿದಂತೆ ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸೇರಿದಂತೆ ಇನ್ನೂ ಹಲವರು ಹಾಜರಿದ್ದರು. ಈ ವೇಳೆ ಮಾತನಾಡಿದ ನಟಿ ಶ್ರುತಿ, ಕಾಟೇರ ಸಿನಿಮಾದ ಪೋಸ್ಟರ್​ನಲ್ಲಿ ಇರುವ ಮಚ್ಚಿನ ಬಗ್ಗೆ ಮಾತನಾಡಿದರು. ಆ ಮಚ್ಚು ದರ್ಶನ್ ಕೈಯಲ್ಲಿ ಏಕಿದೆ? ‘ಕಾಟೇರ’ ಹೆಸರಿನಲ್ಲಿಯೂ ಮಚ್ಚಿನ ಚಿತ್ರವಿದ್ದು, ಅದು ಯಾಕಿದೆ ಎಂಬುದನ್ನು ಸೂಚ್ಯವಾಗಿ ಶ್ರುತಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 14, 2023 11:45 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More