Video: ಒಂದೇ ವ್ಯಕ್ತಿಗೆ 2 ಬಾರಿ ಥಾರ್​​ನಿಂದ ಗುದ್ದಿದ ವ್ಯಕ್ತಿ, ಮೊದಲನೆಯದು ಆಕಸ್ಮಿಕವಾಗಿರಬಹುದು ಆದರೆ ಎರಡನೇದು?

Updated on: Jul 31, 2025 | 8:14 AM

ಥಾರ್​ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಒಂದೇ ವ್ಯಕ್ತಿಗೆ ಎರಡೆರಡು ಬಾರಿ ಡಿಕ್ಕಿ ಹೊಡೆದಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ. ಎದುರಿನಿಂದ ಬರುತ್ತಿದ್ದ ಬೈಕ್​​ಗೆ ಮೊದಲು ಡಿಕ್ಕಿ ಹೊಡೆದಿದ್ದಾನೆ. ಬಳಿಕ ಬೈಕ್​ನಲ್ಲಿದ್ದ ವೃದ್ಧರೊಬ್ಬರು ಹೇಗೋ ಕಷ್ಟ ಪಟ್ಟು ಎದ್ದು ನಿಲ್ಲುವಷ್ಟರಲ್ಲಿ ಮತ್ತೆ ರಿವರ್ಸ್​ ಬಂದು ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಮೊದಲನೆಯ ಘಟನೆ ಆಕಸ್ಮಿಕವೆನಿಸಿದರೂ ಎರಡನೇ ಬಾರಿಗೆ ಆತ ನಡೆದುಕೊಂಡಿರುವ ರೀತಿ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.ಪೊಲೀಸರು ಬುಧವಾರ ಕಾರು ಚಾಲಕನನ್ನು ಬಂಧಿಸಿದ್ದಾರೆ. ಜುಲೈ 27 ರಂದು ಗಾಂಧಿ ನಗರ ಪ್ರದೇಶದ ಗ್ರೀನ್ ಬೆಲ್ಟ್ ಪಾರ್ಕ್ ಬಳಿ ಈ ಘಟನೆ ನಡೆದಿತ್ತು.

ಜಮ್ಮು, ಜುಲೈ 31: ಥಾರ್​ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಒಂದೇ ವ್ಯಕ್ತಿಗೆ ಎರಡೆರಡು ಬಾರಿ ಡಿಕ್ಕಿ ಹೊಡೆದಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ. ಎದುರಿನಿಂದ ಬರುತ್ತಿದ್ದ ಬೈಕ್​​ಗೆ ಮೊದಲು ಡಿಕ್ಕಿ ಹೊಡೆದಿದ್ದಾನೆ. ಬಳಿಕ ಬೈಕ್​ನಲ್ಲಿದ್ದ ವೃದ್ಧರೊಬ್ಬರು ಹೇಗೋ ಕಷ್ಟ ಪಟ್ಟು ಎದ್ದು ನಿಲ್ಲುವಷ್ಟರಲ್ಲಿ ಮತ್ತೆ ರಿವರ್ಸ್​ ಬಂದು ಅವರಿಗೆ ಡಿಕ್ಕಿ ಹೊಡೆದಿದ್ದಾನೆ.

ಮೊದಲನೆಯ ಘಟನೆ ಆಕಸ್ಮಿಕವೆನಿಸಿದರೂ ಎರಡನೇ ಬಾರಿಗೆ ಆತ ನಡೆದುಕೊಂಡಿರುವ ರೀತಿ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.ಪೊಲೀಸರು ಬುಧವಾರ ಕಾರು ಚಾಲಕನನ್ನು ಬಂಧಿಸಿದ್ದಾರೆ. ಜುಲೈ 27 ರಂದು ಗಾಂಧಿ ನಗರ ಪ್ರದೇಶದ ಗ್ರೀನ್ ಬೆಲ್ಟ್ ಪಾರ್ಕ್ ಬಳಿ ಈ ಘಟನೆ ನಡೆದಿತ್ತು. ಬೈಕ್​​ನಲ್ಲಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ.ಚಾಲಕ ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡದೆ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿಯನ್ನು ಮನ್ನನ್ ಆನಂದ್ ಎಂದು ಗುರುತಿಸಲಾಗಿದೆ ಎಂದು ಜಮ್ಮು ಪೊಲೀಸರು ಎಕ್ಸ್ ನಲ್ಲಿ ತಿಳಿಸಿದ್ದಾರೆ.

ಘಟನೆಯ ನಂತರ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣವನ್ನು ಎಸ್‌ಡಿಪಿಒ ಸೌತ್ ಮತ್ತು ಎಸ್‌ಪಿ ಸೌತ್ ಅವರ ನಿಕಟ ಮೇಲ್ವಿಚಾರಣೆಯಲ್ಲಿ ನಿರ್ವಹಿಸಲಾಯಿತು, ಅವರು ಗಾಂಧಿ ನಗರ ಪೊಲೀಸರಿಗೆ ತಕ್ಷಣದ ಮತ್ತು ಸಂಪೂರ್ಣ ತನಿಖೆ ನಡೆಸುವಂತೆ ನಿರ್ದೇಶಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ