ಕಾಂಗ್ರೆಸ್ ಹಿರಿಯ ನಾಯಕ ಮುನಿಯಪ್ಪ ಆರೋಗ್ಯ ಸಚಿವ ಸುಧಾಕರರನ್ನು ಪದೇಪದೆ ಭೇಟಿಯಾಗುತ್ತಿರುವುದು ಯಾಕೆ?
ಸುಧಾಕರ್ ನಿವಾಸದ ಮುಂದೆ ಮುನಿಯಪ್ಪ

ಕಾಂಗ್ರೆಸ್ ಹಿರಿಯ ನಾಯಕ ಮುನಿಯಪ್ಪ ಆರೋಗ್ಯ ಸಚಿವ ಸುಧಾಕರರನ್ನು ಪದೇಪದೆ ಭೇಟಿಯಾಗುತ್ತಿರುವುದು ಯಾಕೆ?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 24, 2022 | 1:00 PM

ಇತ್ತೀಚಿಗಷ್ಟೇ ಸುಧಾಕರ್ ಅವರನ್ನು ಭೇಟಿಯಾಗಿದ್ದ ಮುನಿಯಪ್ಪ ಶನಿವಾರ ಪುನಃ ಸಚಿವರ ಬೆಂಗಳೂರು ಮನೆ ಮುಂದೆ ಕಾಣಿಸಿಕೊಂಡರು.

ಬೆಂಗಳೂರು:  ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆ ಹೆಚ್ ಮುನಿಯಪ್ಪ (KH Muniyappa) ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ ಅಂತ ಹೇಳುವ ಗುಂಪೊಂದಿದೆ. ಆದರೆ ಪಕ್ಷದ ಹಿರಿಯ ನಾಯಕ ಪದೇಪದೆ ಬೊಮ್ಮಾಯಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿರುವ ಕೆ ಸುಧಾಕರ್ (Dr K Sudhakar) ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸುತ್ತಿರುವುದು ಭಾರಿ ಕುತೂಹಲ ಮೂಡಿಸುತ್ತಿದೆ. ಇತ್ತೀಚಿಗಷ್ಟೇ ಸುಧಾಕರ್ ಅವರನ್ನು ಭೇಟಿಯಾಗಿದ್ದ ಮುನಿಯಪ್ಪ ಶನಿವಾರ ಪುನಃ ಸಚಿವರ ಬೆಂಗಳೂರು (Bengaluru) ಮನೆ ಮುಂದೆ ಕಾಣಿಸಿಕೊಂಡರು.