ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10, 2026ರ ದೈನಂದಿನ ರಾಶಿ ಭವಿಷ್ಯ

Updated on: Sep 10, 2026 | 6:18 AM

ಡಾ. ಬಸವರಾಜ ಗುರೂಜಿ ಅವರು ದಿನಾಂಕ 10-09-2026ರ ದ್ವಾದಶ ರಾಶಿಗಳ ದೈನಂದಿನ ಫಲಾಫಲಗಳನ್ನು ವಿವರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ರಾಶಿ ಚಿಹ್ನೆಗೂ ಹಣಕಾಸು, ಆರೋಗ್ಯ, ಸಂಬಂಧಗಳು, ವೃತ್ತಿ ಮತ್ತು ಪ್ರಯಾಣಕ್ಕೆ ಸಂಬಂಧಿಸಿದಂತೆ ಶುಭ-ಅಶುಭಗಳ ಕುರಿತು ಮಾಹಿತಿ ನೀಡಲಾಗಿದೆ. ಜೊತೆಗೆ ಅದೃಷ್ಟ ಬಣ್ಣ, ಅದೃಷ್ಟ ಸಂಖ್ಯೆ ಮತ್ತು ದಿನದ ಮಂತ್ರ ಜಪಗಳನ್ನೂ ತಿಳಿಸಲಾಗಿದೆ.

ಇಂದು 10-09-2026, ಗುರುವಾರ, ದಕ್ಷಿಣಾಯನ, ಶ್ರಾವಣ ಮಾಸ, ಕೃಷ್ಣ ಪಕ್ಷ, ಚತುರ್ದಶಿ, ಮಖಾ ನಕ್ಷತ್ರ, ಸಿದ್ಧ ಯೋಗ, ಶಕುನ ಕರಣ ಇದ್ದು, ರಾಹು ಕಾಲವು ಮಧ್ಯಾಹ್ನ 1 ಗಂಟೆ 48 ನಿಮಿಷದಿಂದ 3 ಗಂಟೆ 20 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭ ಕಾಲವು ಮಧ್ಯಾಹ್ನ 12 ಗಂಟೆ 16 ನಿಮಿಷದಿಂದ 1 ಗಂಟೆ 48 ನಿಮಿಷದ ತನಕ ಇರುತ್ತದೆ. ಗುರುಗಳ ಲಹರಿಗಳಿರುವುದರಿಂದ ಈ ದಿನವು ಗುರುವಾರಕ್ಕೆ ವಿಶೇಷ ಮಹತ್ವವನ್ನು ತಂದುಕೊಡುತ್ತದೆ. ಹುಬ್ಬಳ್ಳಿ ಗುರುಸಿದ್ಧೇಶ್ವರ ರಥೋತ್ಸವ, ಕೊಡಿಪ್ಪಾಡಿ ಜನಾರ್ಧನ ತೀರ್ಥ ಪುಣ್ಯದಿನ ಮತ್ತು ಒಂಟಿ ಅಂಗಡಿ ಜಾತ್ರೆ ಸಹ ಇದೇ ದಿನ ನಡೆಯಲಿದೆ. ರವಿ ಸಿಂಹ ರಾಶಿಯಲ್ಲಿ ಹಾಗೂ ಚಂದ್ರ ಸಿಂಹ ರಾಶಿಯ ಮಖಾ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಈ ದಿನದ ದ್ವಾದಶ ರಾಶಿಗಳ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More