ಬೆಂಗಳೂರಿನಲ್ಲಿ ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿತ

Updated on: Jul 03, 2025 | 2:43 PM

ಎಕ್ಸ್ ಟ್ರಾ ಕಾಫಿ ಕಪ್ ಕೊಡದಿದ್ದಕ್ಕೆ ಹೋಟೆಲ್‌ ಸಿಬ್ಬಂದಿಗೆ ನಾಲ್ಕೈದು ಜನ ಸೇರಿಕೊಂಡು ಹಿಗ್ಗಾಮುಗ್ಗಾ ಹಲ್ಲೆ ನಡೆಸದ್ದಾರೆ. ಈ ಘಟನೆ ನಿನ್ನೆ (ಜುಲೈ 02) ಬೆಂಗಳೂರಿನ ಶೇಷಾದ್ರಿಪುರಂನ (Sheshadripuram )ನಮ್ಮ ಫಿಲ್ಟರ್ ಕಾಫಿ ಶಾಪ್‌ನಲ್ಲಿ ನಡೆದಿದೆ. ಕಾಫಿ ಶಾಪ್‌ಗೆ ಬಂದಿದ್ದ ನಾಲ್ವರು ಕಾಫಿಯನ್ನು ಕೊಂಡು ಮತ್ತೊಂದು ಕಪ್‌ ಕೇಳಿದ್ದಾರೆ. ಈ ವೇಳೆ, ಹೋಟೆಲ್‌ ಸಿಬ್ಬಂದಿ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ನಾಲ್ವರು, ಹೋಟೆಲ್‌ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಮನಬಂದಂತೆ ಥಳಿಸಿದ್ದಾರೆ.

ಬೆಂಗಳೂರು, (ಜುಲೈ 03): ಎಕ್ಸ್​ಟ್ರಾ ಕಾಫಿ ಕಪ್ ಕೊಡದಿದ್ದಕ್ಕೆ ಹೋಟೆಲ್‌ ಸಿಬ್ಬಂದಿಗೆ ನಾಲ್ಕೈದು ಜನ ಸೇರಿಕೊಂಡು ಹಿಗ್ಗಾಮುಗ್ಗಾ ಹಲ್ಲೆ ನಡೆಸದ್ದಾರೆ. ಈ ಘಟನೆ ನಿನ್ನೆ (ಜುಲೈ 02) ಬೆಂಗಳೂರಿನ ಶೇಷಾದ್ರಿಪುರಂನ (Sheshadripuram ) ನಮ್ಮ ಫಿಲ್ಟರ್ ಕಾಫಿ ಶಾಪ್‌ನಲ್ಲಿ ನಡೆದಿದೆ. ಕಾಫಿ ಶಾಪ್‌ಗೆ ಬಂದಿದ್ದ ನಾಲ್ವರು ಕಾಫಿಯನ್ನು ಕೊಂಡು ಮತ್ತೊಂದು ಎಕ್ಸ್​ಟ್ರಾ ಕಪ್‌ ಕೇಳಿದ್ದಾರೆ. ಈ ವೇಳೆ, ಹೋಟೆಲ್‌ ಸಿಬ್ಬಂದಿ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ನಾಲ್ವರು, ಹೋಟೆಲ್‌ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಮನಬಂದಂತೆ ಥಳಿಸಿದ್ದಾರೆ. ಕಪಾಳಕ್ಕೆ ಹೊಡೆದು, ಮುಖಕ್ಕೆ ಗುದ್ದಿ, ಕಾಲಿನಿಂದ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನು ಈ ಪ್ರಕರಣದ ಸಂಬಂಧ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಪ್ರತಿಕ್ರಿಯಿಸಿದ್ದು, ಶೇಷಾದ್ರಿಪುರಂ ನಲ್ಲಿ ನಮ್ಮ ಫಿಲ್ಟರ್ ಕಾಫಿ ಶಾಪ್ ನಲ್ಲಿ ಗಲಾಟೆ ಆಗಿದೆ. ನಿನ್ನೆ (ಜುಲೈ 02) ಸಂಜೆ 6:30 ಕ್ಕೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಸಂಬಂಧ ಶೇಷಾದ್ರಿಪುರಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನ ಬಂಧಿಸಲಾಗಿದ್ದು, ವಿಚಾರಣೆ ನಡೆದಿದೆ. ಎಕ್ಸ್ ಟ್ರಾ ಕಪ್ ಕೆಳಿದ್ದಾರೆ. ಅದು ಕೊಡುವ ರೂಲ್ಸ್ ಇಲ್ಲ. ಈ ವಿಚಾರಕ್ಕೆ ಸಿಬ್ಬಂದಿ ಹಾಗೂ ಕಸ್ಟಮರ್ ನಡುವೆ ಗಲಾಟೆ ಆಗಿದ್ದು, ಶೀಘ್ರದಲ್ಲೇ ಉಳಿದ ಆರೋಪಿಗಳನ್ನ ಬಂಧಿಸಿ ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More