ಮೈದುಂಬಿ ಹರಿಯುತ್ತಿವೆ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು: 16 ಸೇತುವೆಗಳು ಜಲಾವೃತ, ಸ್ಥಳಕ್ಕೆ ಎಸ್​ಪಿ ಭೇಟಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 21, 2023 | 8:24 PM

ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು ಮೈದುಂಬಿ ಹರಿಯುತ್ತಿದ್ದು, ಜಿಲ್ಲೆಯ 9 ಠಾಣಾ ವ್ಯಾಪ್ತಿಯ 16 ಸೇತುವೆಗಳು ಜಲಾವೃತವಾಗಿವೆ. ಎಸ್‌ಪಿ ಡಾ.ಸಂಜೀವ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Chikodi, ಜುಲೈ 20: ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು (rivers) ಮೈದುಂಬಿ ಹರಿಯುತ್ತಿವೆ. ಜೊತೆಗೆ ಜಿಲ್ಲೆಯ 9 ಠಾಣಾ ವ್ಯಾಪ್ತಿಯ 16 ಸೇತುವೆಗಳು ಜಲಾವೃತವಾಗಿವೆ. ದೂಧ್‌ಗಂಗಾ, ವೇದಗಂಗಾ, ಸಂಗಮ ಸ್ಥಾನ ಕುನ್ನೂರು ಬಳಿಯ ಕುನ್ನೂರು-ಬಾರವಾಡ ಸೇತುವೆ ಜಲಾವೃತವಾಗಿದೆ. ಕುನ್ನೂರು ಬಾರವಾಡ ಬಳಿ ದೂಧ್‌ಗಂಗಾ ವೇದಗಂಗಾ ಸಂಗಮ ಕ್ಷೇತ್ರದ ಬಳಿ‌ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಹಾಗಾಗಿ ಬೆಳಗಾವಿ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Follow us on