Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkaballapur: ಯುವತಿಯನ್ನು ಕಾಮಿಸಿ ಮದುವೆ ಒಲ್ಲೆನೆಂದ ಯುವಕ ಗ್ರಾಮಸ್ಥರ ಒದೆ ಬಿದ್ದ ಮೇಲೆ ಅವಳೇ ನನ್ನ ಹೆಂಡ್ತಿ ಅಂದ!

Chikkaballapur: ಯುವತಿಯನ್ನು ಕಾಮಿಸಿ ಮದುವೆ ಒಲ್ಲೆನೆಂದ ಯುವಕ ಗ್ರಾಮಸ್ಥರ ಒದೆ ಬಿದ್ದ ಮೇಲೆ ಅವಳೇ ನನ್ನ ಹೆಂಡ್ತಿ ಅಂದ!

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 21, 2023 | 7:29 PM

ಇಟಪಮಹಳ್ಳಿ ಗ್ರಾಮದವರ ಸಮ್ಮುಖದಲ್ಲಿ ಅವನು ತಾನು ಪ್ರೀತಿಸುವ ನೆಪದಲ್ಲಿ ಕಾಮಿಸಿದ ಯುವತಿಗೆ ತಾಳಿ ಬಿಗಿದಿದ್ದಾನೆ. ಗ್ರಾಮಸ್ಥರು ಹರಸಿ ಆಶೀರ್ವದಿಸಿದ್ದಾರೆ.

ಚಿಕ್ಕಬಳ್ಳಾಪುರ: ಮದುವೆಗಳು ಹೀಗೂ ಆಗುತ್ತವೆ! ಇದು ಸಾಮಾನ್ಯ ಮದುವೆಯಲ್ಲ. ಕತೆಯಲ್ಲಿ ಭಾರೀ ಟ್ವಿಸ್ಟ್ ಇದೆ. ಅಸಲು ವಿಷಯವೇನೆಂದರೆ, ಮದುವೆ ಗಂಡು ಕಾಣ್ತಾ ಇದಾನಲ್ಲ ಅವನ ಹೆಸರು ಚೇತನ್ (Chethan) ಅಂತ, ಚಿಕ್ಕಬಳ್ಳಾಪುರ (Chikkaballapura) ತಾಲ್ಲೂಕಿನ ಚಿಕ್ಕಕಿರುಗಂಬಿ ಗ್ರಾಮದವನು. ಅವನಿಗೆ ಇದೇ ತಾಲ್ಲೂಕಿನ ಇಟಪನಹಳ್ಳಿ (Itapamahalli) ಗ್ರಾಮದ ಯುವತಿಯೊಂದಿಗೆ ಲವ್ ಆಗಿದೆ. ಅವನದ್ದು ಪ್ರೇಮವಲ್ಲ ಬರೀ ಕಾಮ ಅಂತ ಯುವತಿಗೆ ತಾನು ಗರ್ಭಿಣಿಯಾದ ಬಳಿಕ ಅರಿವಾಗಿದೆ. ನೋ ಮದುವೆ ಅಂತ ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಯುವತಿ ದೈರ್ಯಮಾಡಿ ತನ್ನ ಮನೆಯಲ್ಲಿ ಸತ್ಯ ಸಂಗತಿ ತಿಳಿಸಿದ್ದಾಳೆ. ಅವಳ ಸಂಬಂಧಿಕರು ಚಿಕ್ಕಕಿರುಗಂಬಿಗೆ ಹೋಗಿ ಚೇತನ್ ನನ್ನು ಎಳೆತಂದಿದ್ದಾರೆ. ಅವನನ್ನು ಮದುವೆಗೆ ಒಪ್ಪಿಸುವ ಮೊದಲು ಚೆನ್ನಾಗಿ ತದುಕಿದ್ದಾರೆ. ಇನ್ನು ಉಳಿಗಾಲವಿಲ್ಲ ಅಂತ ಗರ್ಭದಾನಿ ಚೇತನ್ ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಇಟಪಮಹಳ್ಳಿ ಗ್ರಾಮದವರ ಸಮ್ಮುಖದಲ್ಲಿ ಅವನು ತಾನು ಪ್ರೀತಿಸುವ ನೆಪದಲ್ಲಿ ಕಾಮಿಸಿದ ಯುವತಿಗೆ ತಾಳಿ ಬಿಗಿದಿದ್ದಾನೆ. ಗ್ರಾಮಸ್ಥರು ಹರಸಿ ಆಶೀರ್ವದಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 21, 2023 07:28 PM