ಯಾದಗಿರಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಭಾರೀ ಮಳೆ, ಶಹಾಪುರ ಪಟ್ಟಣದ ರಸ್ತೆಗಳು ಜಲಾವೃತ

ಅರುಣ್​ ಕುಮಾರ್​ ಬೆಳ್ಳಿ

Updated on: May 29, 2025 | 10:48 AM

ಶಹಾಪುರ ಪಟ್ಟಣದ ಮೂಲಕ ರಾಜ್ಯ ಹೆದ್ದಾರಿಯೂ ಹಾದುಹೋಗುತ್ತದೆ. ಕಲಬುರಗಿ, ಬೀದರ್, ಭಾಲ್ಕಿ, ಬಸವಕಲ್ಯಾಣ, ಹುಮ್ನಾಬಾದ್ ಮೊದಲಾದ ಕೇಂದ್ರಗಳಿಂದ ಯಾದಗಿರಿ, ದಾವಣಗೆರೆ, ಬೆಂಗಳೂರು ಮುಂತಾದ ಕಡೆ ಹೋಗುವ ಬಸ್ಸುಗಳು ಶಹಾಪುರ ಮೂಲಕವಾಗಿಯೇ ಹೋಗುತ್ತವೆ. ಯಾದಗಿರಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು.

ಯಾದಗಿರಿ, ಮೇ 29: ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಶಹಾಪುರ (Shahapur ) ಒಂದು ಮತ್ತು ಇದು ವ್ಯಾಪಾರ ಕೇಂದ್ರವೂ ಹೌದು. ನಿನ್ನೆ ಯಾದಗಿರಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಶಹಾಪುರ ಪಟ್ಟಣ ಜಲಾವೃತ. ವಿಡಿಯೋದಲ್ಲಿ ಕಾಣುತ್ತಿರುವ ಮುಖ್ಯರಸ್ತೆಯಲ್ಲಿ ಮೊಣಕಾಲು ಮಟ್ಟ ನೀರು ಹರಿಯುತ್ತಿದೆ ಮತ್ತು ಆಗಸದಿಂದ ಜಿಟಿಜಿಟಿ ಮಳೆ ಬೇರೆ ಸುರಿಯುತ್ತಿದೆ. ಆದರೂ ಜನರ ಮತ್ತು ದ್ವಿಚಕ್ರವಾಹನಗಳ ಓಡಾಟ ನಿಂತಿಲ್ಲ, ಮಳೆಯಲ್ಲೂ ಓಡಾಡುತ್ತಿದ್ದಾರೆ. ಇದೊಂದು ವ್ಯಾಪಾರ ಕೇಂದ್ರವಾಗಿರುವುದರಿಂದ ಸುತ್ತಮುತ್ತಲಿನ ಹಳ್ಳಿಗಳ ಜನಕ್ಕೆ ಇಲ್ಲಿಗೆ ಬರೋದು ಅನಿವಾರ್ಯ.

ಇದನ್ನೂ ಓದಿ:  ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: May 29, 2025 10:47 AM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.