ನನ್ನ ರಾಜಕೀಯ ಬದುಕಿಗೆ ಕಾಂಗ್ರೆಸ್ ಮರುಜೀವ ನೀಡಿದೆ ಎಂದಿದ್ದರು ಶೆಟ್ಟರ್: ಡಿಕೆ ಶಿವಕುಮಾರ್
ಮೊನ್ನೆಯವರೆಗೆ ಅವರು ರಾಮಮಂದಿವೂ ಸೇರಿದಂತೆ ಹಲವಾರು ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ನಾಯಕರನ್ನು ಟೀಕಿಸಿದ್ದರು. ಅವರೊಬ್ಬ ಹಿರಿಯ ನಾಯಕರಾಗಿದ್ದ ಕಾರಣ ಸೂಕ್ತ ಸ್ಥಾನಮಾನಗಳಿಂದ ಗೌರವಿಸುವ ಕೆಲಸ ಕಾಂಗ್ರೆಸ್ ಮಾಡಿತ್ತು ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ವಿಧಾನಸಭಾ ಚುನಾವಣಾ (Assembly polls) ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದ ಜಗದೀಶ್ ಶೆಟ್ಟರ್ (Jagadish Shettar) ಲೋಕಸಭಾ ಚುನಾವಣೆ (Lok Sabha polls) ಹತ್ತಿರದಲ್ಲಿರುವಾಗ ಕಾಂಗ್ರೆಸ್ ತೊರೆದು ಬಿಜೆಪಿಗೆ ವಾಪಸ್ಸು ಹೋಗಿದ್ದಾರೆ. ಅವರ ನಡೆ ಮತ್ತು ನಿರ್ಧಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಘಾತ ಮತ್ತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿನ್ನೆ ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಶೆಟ್ಟರ್ ವಿಷಯದಲ್ಲಿ ಮಾತಾಡಿದ್ದ ಶಿವಕುಮಾರ್, ಅವರು ಬಿಜೆಪಿಗೆ ವಾಪಸ್ಸು ಹೋಗೋದು ಸಾಧ್ಯವೇ ಇಲ್ಲ ಅಂತ ಹೇಳಿದ್ದರು. ಇವತ್ತು ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನಿನ್ನೆ ಬೆಳಗ್ಗೆಯೂ ಶೆಟ್ಟರ್ ಜೊತೆ ಮಾತಾಡಿದ್ದೆ, ತನಗೆ ರಾಜಕೀಯ ಮರುಜೀವ ನೀಡಿರುವ ಕಾಂಗ್ರೆಸ್ ಪಕ್ಷವನ್ನು ಬಿಡುವ ಮಾತೇ ಇಲ್ಲ ಅಂತ ಹೇಳಿದ್ದರು. ಮೊನ್ನೆಯವರೆಗೆ ಅವರು ರಾಮಮಂದಿವೂ ಸೇರಿದಂತೆ ಹಲವಾರು ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ನಾಯಕರನ್ನು ಟೀಕಿಸಿದ್ದರು. ಅವರೊಬ್ಬ ಹಿರಿಯ ನಾಯಕರಾಗಿದ್ದ ಕಾರಣ ಸೂಕ್ತ ಸ್ಥಾನಮಾನಗಳಿಂದ ಗೌರವಿಸುವ ಕೆಲಸ ಕಾಂಗ್ರೆಸ್ ಮಾಡಿತ್ತು. ಅವರು ಬೆಳಗ್ಗೆ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿದ್ದಾರೆ ಅನ್ನೋದು ಮಾಧ್ಯಮದವರಿಂದಲೇ ಗೊತ್ತಾಗಿದ್ದು ಎಂದು ಶಿವಕುಮಾರ್ ವಿಷಾದದಿಂದ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ