Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅಕ್ಬರ್​-ಬೀರಬಲ್​ ಬುದ್ಧಿವಂತಿಕೆ ಬಳಸಿ ಬಿಜೆಪಿ ನಾಯಕರನ್ನು ಅಣಕಿಸಿದ್ದು ಹೀಗೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅಕ್ಬರ್​-ಬೀರಬಲ್​ ಬುದ್ಧಿವಂತಿಕೆ ಬಳಸಿ ಬಿಜೆಪಿ ನಾಯಕರನ್ನು ಅಣಕಿಸಿದ್ದು ಹೀಗೆ

ಸಾಧು ಶ್ರೀನಾಥ್​
|

Updated on: Aug 22, 2023 | 10:32 AM

Akbar Birbal wit: ಬಿಜೆಪಿ ಶಾಸಕ ಎಸ್​.ಟಿಸೋಮಶೇಖರ್ ಬೆನ್ನಿಗೆ ನಿಂತಿದ್ದ ಪಟಾಲಂ ನಿನ್ನೆ ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಿದೆ. ಎಸ್​ಟಿಎಸ್ ಆಪ್ತರು ಸೇರಿದಂತೆ ಹಲವು ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾದ್ರು.. ಈ ಸಂದರ್ಭದಲ್ಲಿ ಹೊಸದಾಗಿ ಸೇರ್ಪಡೆಯಾದ ನಾಯಕರ ಎದುರು ಡಿಕೆ ಶಿವಕುಮಾರ್ ಅವರು​ ಅಕ್ಬರ್​-ಬೀರಬಲ್​ ಬುದ್ಧಿವಂತಿಕೆ ಬಳಸಿ ನವರಂಗಿ ನಾರಾಯಣ, ಅಶೋಕ್​​, ಬೊಮ್ಮಾಯಿ ಅಂತ ಬಿಜೆಪಿ ನಾಯಕರನ್ನು ಅಣಕಿಸಿದ್ದು ಹೀಗೆ. ವಿಡಿಯೋ ನೋಡಿ

ಕಾಂಗ್ರೆಸ್​ನ ಟ್ರಬಲ್ ಶೂಟರ್, ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ವಿರೋಧ ಪಕ್ಷಗಳಿಗೆ ಡೈನಾಮೆಟ್ ಇಡ್ತಿದ್ದಾರೆ. ಬಿಜೆಪಿ ಜೊತೆ ಜೆಡಿಎಸ್ ನಾಯಕರಿಗೂ ನಿದ್ದೆಗೆಡಿಸಿದ್ದಾರೆ. ಬೆಂಗಳೂರಿನಿಂದಲೇ ಆಪರೇಷನ್ ಕಾಂಗ್ರೆಸ್ (Congress Operation) ಶುರುವಾಗಿದೆ. ಬಿಬಿಎಂಪಿ ಮೇಲೆ ಕಣ್ಣಿಟ್ಟಿರೋ ಕೈ ಪಡೆ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್​ಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಬಾಂಬೆ ಫ್ರೆಂಡ್ಸ್ ಘರ್​ವಾಪ್ಸಿ ಆಗ್ತಾರೆ ಎಂಬ ಗುಸು ಗುಸು ನಡುವೆ ಸೋಮಶೇಖರ್ ಪ್ರತಿನಿಧಿಸೋ ಯಶವಂತಪುರ ವಿಧಾನಸಭಾ ಕ್ಷೇತ್ರ, ಬೈರತಿ ಬಸವರಾಜ್​ರ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಆಪರೇಷನ್ ಕಾಂಗ್ರೆಸ್ ಸಕ್ಸಸ್ ಆಗಿದೆ. ಬಿಜೆಪಿ ಶಾಸಕ ಎಸ್​.ಟಿಸೋಮಶೇಖರ್ ಬೆನ್ನಿಗೆ ನಿಂತಿದ್ದ ಪಟಾಲಂ ನಿನ್ನೆ ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಿದೆ. ಎಸ್​ಟಿಎಸ್ ಆಪ್ತರಾದ ಮಾಜಿ ಕಾರ್ಪೋರೇಟರ್ ಆರ್ಯ ಶ್ರೀನಿವಾಸ್, ರಾಜಣ್ಣ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಮಾದಯ್ಯ, ಹನುಮಂತೇಗೌಡ ಸೇರಿದಂತೆ ಹಲವು ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾದ್ರು..

ಈ ಸಂದರ್ಭದಲ್ಲಿ ಹೊಸದಾಗಿ ಸೇರ್ಪಡೆಯಾದ ನಾಯಕರ ಎದುರು ಡಿಕೆ ಶಿವಕುಮಾರ್ ಅವರು​ ಅಕ್ಬರ್​-ಬೀರಬಲ್​ ಬುದ್ಧಿವಂತಿಕೆ ಬಳಸಿ (Akbar Birbal wit) ನವರಂಗಿ ನಾರಾಯಣ, ಅಶೋಕ್​​, ಬೊಮ್ಮಾಯಿ ಅಂತ ಬಿಜೆಪಿ ನಾಯಕರನ್ನು (BJP leaders) ಅಣಕಿಸಿದ್ದು ಹೀಗೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ