Video: ಶಿಲ್ಲಾಂಗ್ ಬೀದಿಯಲ್ಲಿ ಖುಷಿಯಿಂದ ಕುಣಿದ ವಿದೇಶಿ ಯುವತಿ, ಸ್ಥಳೀಯರ ಕಾಳಜಿಗೊಂದು ಸಲಾಂ
ವಿದೇಶಿ ಹೆಣ್ಣುಮಕ್ಕಳೆಂದರೆ ಸಾಕು ಕೆಟ್ಟ ದೃಷ್ಟಿಯಿಂದ ನೋಡುವ ಸಾಕಷ್ಟು ಜನರಿದ್ದಾರೆ. ಆದರೆ ಶಿಲ್ಲಾಂಗ್ನ ಜನತೆ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಶಿಲ್ಲಾಂಗನ ಬೀದಿಯಲ್ಲಿ ವಿದೇಶಿ ಯುವತಿ ಖುಷಿಯಿಂದ ಕುಣಿದಿದ್ದಾಳೆ, ಆದರೆ ಸ್ಥಳೀಯರು ಯಾರೂ ಕೂಡ ಆಕೆಯನ್ನು ಕೆಟ್ಟದಾಗಿ ನೋಡುವುದು ಹಾಗಿರಲಿ, ಆಕೆಯ ಹತ್ತಿರ ಸುಳಿಯಲು ಕೂಡ ಯಾರಿಗೂ ಬಿಡದೆ ಆಕೆಯನ್ನು ರಕ್ಷಣೆ ಮಾಡಿರುವ ವಿಡಿಯೋ ಎಲ್ಲರ ಹೃದಯ ಗೆದ್ದಿದೆ. ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ವಿದೇಶಿ ಯುವತಿಯೊಬ್ಬರು ಶಿಲ್ಲಾಂಗ್ನ ಬೀದಿಯಲ್ಲಿ ನೃತ್ಯ ಮಾಡಿದ್ದಾರೆ. ಅಲ್ಲಿದ್ದ ಜನರು ಆಕೆಯನ್ನು ಸುತ್ತುವರೆದು ಆಕೆಯನ್ನು ರಕ್ಷಣೆ ಮಾಡಿದ್ದಲ್ಲದೆ ಮುಕ್ತವಾಗಿ ಭಯವಿಲ್ಲದೆ ನೃತ್ಯ ಮಾಡಲು ಅವಕಾಶ ಮಾಡಿಕೊಟ್ಟಿರುವ ಘಟನೆ ನಡೆದಿದೆ.
ಶಿಲ್ಲಾಂಗ್, ಜನವರಿ 06: ವಿದೇಶಿ ಹೆಣ್ಣುಮಕ್ಕಳೆಂದರೆ ಸಾಕು ಕೆಟ್ಟ ದೃಷ್ಟಿಯಿಂದ ನೋಡುವ ಸಾಕಷ್ಟು ಜನರಿದ್ದಾರೆ. ಆದರೆ ಶಿಲ್ಲಾಂಗ್ನ ಜನತೆ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಶಿಲ್ಲಾಂಗನ ಬೀದಿಯಲ್ಲಿ ವಿದೇಶಿ ಯುವತಿ ಖುಷಿಯಿಂದ ಕುಣಿದಿದ್ದಾಳೆ, ಆದರೆ ಸ್ಥಳೀಯರು ಯಾರೂ ಕೂಡ ಆಕೆಯನ್ನು ಕೆಟ್ಟದಾಗಿ ನೋಡುವುದು ಹಾಗಿರಲಿ, ಆಕೆಯ ಹತ್ತಿರ ಸುಳಿಯಲು ಕೂಡ ಯಾರಿಗೂ ಬಿಡದೆ ಆಕೆಯನ್ನು ರಕ್ಷಣೆ ಮಾಡಿರುವ ವಿಡಿಯೋ ಎಲ್ಲರ ಹೃದಯ ಗೆದ್ದಿದೆ. ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ವಿದೇಶಿ ಯುವತಿಯೊಬ್ಬರು ಶಿಲ್ಲಾಂಗ್ನ ಬೀದಿಯಲ್ಲಿ ನೃತ್ಯ ಮಾಡಿದ್ದಾರೆ. ಅಲ್ಲಿದ್ದ ಜನರು ಆಕೆಯನ್ನು ಸುತ್ತುವರೆದು ಆಕೆಯನ್ನು ರಕ್ಷಣೆ ಮಾಡಿದ್ದಲ್ಲದೆ ಮುಕ್ತವಾಗಿ ಭಯವಿಲ್ಲದೆ ನೃತ್ಯ ಮಾಡಲು ಅವಕಾಶ ಮಾಡಿಕೊಟ್ಟಿರುವ ಘಟನೆ ನಡೆದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

