ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್ ನಿರ್ಮಾಣ

Updated on: Apr 30, 2025 | 5:36 PM

ಶಿಲ್ಲಾಂಗ್-ಶಿಲಚರ್ ನಡುವೆ ಹೆದ್ದಾರಿ ನಿರ್ಮಾಣಕ್ಕಾಗಿ 22,864 ಕೋಟಿ ರೂ. ಹಣ ಮೀಸಲಿಟ್ಟಿದ್ದೇವೆ. ಈ ಹೆದ್ದಾರಿಯಿಂದ ಈಶಾನ್ಯ ಭಾಗದ ಜನರಿಗೆ ಅನುಕೂಲವಾಗಲಿದೆ. ರೈತರ ಹಿತದೃಷ್ಟಿಯಿಂದ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ನವದೆಹಲಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಶಿಲ್ಲಾಂಗ್ ನಿಂದ ಸಿಲ್ಚಾರ್ ವರೆಗಿನ ಹೊಸ ಹೆದ್ದಾರಿಗೆ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಸಿಕ್ಕಿದೆ. ಇದನ್ನು ಶಿಲ್ಲಾಂಗ್ ನಿಂದ ಸಿಲ್ಚಾರ್ ಗೆ ಹೈ-ಸ್ಪೀಡ್ ಕಾರಿಡಾರ್ ಹೆದ್ದಾರಿ ಎಂದು ಕರೆಯಲಾಗುತ್ತದೆ.

ನವದೆಹಲಿ, ಏಪ್ರಿಲ್ 30: ಶಿಲ್ಲಾಂಗ್-ಶಿಲಚರ್ ನಡುವೆ ಮೇಘಾಲಯ ಮತ್ತು ಅಸ್ಸಾಂ ಅನ್ನು ಸಂಪರ್ಕಿಸುವ ಹೈ-ಸ್ಪೀಡ್ ಹೆದ್ದಾರಿ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟದ (Union Cabinet) ಅನುಮೋದನೆ ಸಿಕ್ಕಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದು ಶಿಲ್ಲಾಂಗ್ ನಿಂದ ಸಿಲ್ಚಾರ್ ವರೆಗೆ ಇರುತ್ತದೆ. ಈ ಯೋಜನೆಯ ಅಂದಾಜು ವೆಚ್ಚ ರೂ. 22,864 ಕೋಟಿ. ಪ್ರಸ್ತಾವಿತ ಗ್ರೀನ್‌ಫೀಲ್ಡ್ ಹೈ-ಸ್ಪೀಡ್ ಕಾರಿಡಾರ್ ಗುವಾಹಟಿಯಿಂದ ಸಿಲ್ಚಾರ್ ಗೆ ಚಲಿಸುವ ಸಂಚಾರಕ್ಕೆ ಸೇವಾ ಮಟ್ಟವನ್ನು ಸುಧಾರಿಸುತ್ತದೆ. ಈ ಕಾರಿಡಾರ್ ಅಭಿವೃದ್ಧಿಯು ತ್ರಿಪುರ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನ ಬರಾಕ್ ಕಣಿವೆ ಪ್ರದೇಶಗಳಿಗೆ ಮುಖ್ಯ ಭೂಭಾಗ ಮತ್ತು ಗುವಾಹಟಿಯಿಂದ ಸಂಪರ್ಕವನ್ನು ಸುಧಾರಿಸುತ್ತದೆ, ಪ್ರಯಾಣದ ದೂರ ಮತ್ತು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More