ಮಕ್ಕಳಾಗಿಲ್ಲ ಎಂದು ಕೊರಗುತ್ತಿರುವವರಿಗೆ ವಿಶೇಷ ದೇವಸ್ಥಾನದ ಬಗ್ಗೆ ಹೇಳಿದ ಶೈನ್ ಶೆಟ್ಟಿ

Updated on: Feb 05, 2026 | 8:40 AM

ಮಕ್ಕಳಾಗಿಲ್ಲ ಎಂದು ಕೊರಗುವವರಿಗೋಸ್ಕರ ಶೈನ್ ಶೆಟ್ಟಿ ಹೊಸ ದೇವಸ್ಥಾನದ ಹೆಸರು ಹೇಳಿದ್ದಾರೆ. ಆ ದೇವಸ್ಥಾನಕ್ಕೆ ಬಂದರೆ ಏನಾಗುತ್ತದೆ ಮತ್ತು ಆ ಬಳಿಕ ಏನು ಮಾಡಬೇಕು ಎಂಬುದರ ಕಥೆಯನ್ನು ಶೈನ್ ಶೆಟ್ಟಿ ಅವರು ವಿವರಿಸಿದ್ದಾರೆ. ದೇವಸ್ಥಾನದ ವಿಶೇಷವಾಗಿ ಮಕ್ಕಳಾಗಿಲ್ಲ ಎಂದು ಕೊರಗುತ್ತಾ ಇರುವವರಿಗೆ ಎಂಬುದು ವಿಶೇಷ.

ಶೈನ್ ಶೆಟ್ಟಿ ಅವರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​​ಗಳನ್ನು ಕೂಡ ಮಾಡುತ್ತಿರುತ್ತಾರೆ. ಈಗ ಅವರ ಹೊಸ ವಿಡಿಯೋ ಗಮನ ಸೆಳೆದಿದೆ. ಮಕ್ಕಳಾಗದೆ ಕೊರಗುತ್ತಿರುವವರಿಗೆ ಈ ವಿಡಿಯೋ ಸಹಕಾರಿ ಆಗಲಿದೆ. ಕೊಚ್ಚಿಯಿಂದ ಎರಡೂವರೆ ಗಂಟೆ ದೂರದಲ್ಲಿರೋ ದೇವಸ್ಥಾನ ಇದು. ಮನ್ನರಸಲಾ (MANNARASALA) ಎಂಬುದು ದೇವಸ್ಥಾನದ ಹೆಸರು. ಇಲ್ಲಿ ಸೂಚಿಸಿದ ಒಂದು ಸೇವೆ ಕೊಟ್ಟರೆ ಮಕ್ಕಳಾಗುತ್ತದೆ ಎಂಬುದು ನಂಬಿಕೆ. ಮಗು ಆದ ಬಳಿಕ ಐದು ಬಾರಿ ಇಲ್ಲಿಗೆ ಭೇಟಿ ನೀಡಬೇಕಂತೆ. ಮಗು ಆಗದೆ ಇರುವವರು ಮಾತ್ರವಲ್ಲ ನಾಗದೋಷ ಇರುವವರಿಗೂ ಈ ಕ್ಷೇತ್ರ ಬೆಸ್ಟ್ ಎನ್ನುತ್ತಾರೆ ಶೈನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More