ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು

Edited By:

Updated on: Mar 13, 2026 | 5:42 PM

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ನಡುವೆ, ಯುಎಇಯಿಂದ ಹೊರಟ ಡಾಂಬರು ಹೊತ್ತ ಚೆಂಗ್ ಎಕ್ಸ್ ಹಡಗು ಕಾರವಾರ ಬಂದರನ್ನು ತಲುಪಿದೆ. ಹರ್ಮುಜ್ ಜಲಸಂಧಿಯ ನಿರ್ಬಂಧಗಳನ್ನು ತಪ್ಪಿಸಿ ಮತ್ತೊಂದು ಮಾರ್ಗದಲ್ಲಿ ಬಂದ ಈ ಹಡಗು 3,100 ಟನ್ ಡಾಂಬರನ್ನು ಹೊತ್ತು ಬಂದಿದೆ. ವಿಡಿಯೋ ಇಲ್ಲಿದೆ ನೋಡಿ.

ಕಾರವಾರ, ಮಾರ್ಚ್​ 13: ಯುಎಇಯಿಂದ ಡಾಂಬರು ಹೊತ್ತು ಕಾರವಾರ ಬಂದರಿಗೆ ಚೆಂಗ್ ಎಕ್ಸ್ ಎಂಬ ಹಡಗು ಆಗಮಿಸಿದೆ. ಮಧ್ಯಪ್ರಾಚ್ಯದಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ಹರ್ಮುಜ್ ಜಲಸಂಧಿಯಲ್ಲಿನ ನಿರ್ಬಂಧಗಳ ಕಾರಣದಿಂದ ಪೆಟ್ರೋಲಿಯಂ ಮತ್ತು ಕಚ್ಚಾ ಡಾಂಬರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಈ ನಿರ್ಬಂಧದ ನಡುವೆಯೂ, ಮಾರ್ಚ್ 3ರಂದು ಯುಎಇಯಿಂದ ಹೊರಟಿದ್ದ ಈ ಹಡಗು ಮತ್ತೊಂದು ಮಾರ್ಗದ ಮೂಲಕ ಸುರಕ್ಷಿತವಾಗಿ ಬಂದರನ್ನು ತಲುಪಿದೆ. ಸರಿಸುಮಾರು 5,500 ಟನ್ ಸಾಮರ್ಥ್ಯದ ಈ ಹಡಗು 3,100 ಟನ್ ಡಾಂಬರನ್ನು ಹೊತ್ತು ಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಸೂರಜ್​, ಮಹಾವೀರ್​ ಉತ್ತುರೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More