ಗದಗ: ಐಬಿ ರೂಮ್ಗಾಗಿ ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಮತ್ತು ಸುಜಾತಾ ದೊಡ್ಡಮನಿ ನಡುವೆ ವಾಗ್ವಾದ
ಮುಂಡರಗಿ ಪಟ್ಟಣದ ಪಿಡಬ್ಯ್ಲೂಡಿ ಇಲಾಖೆಗೆ ಸೇರಿದ ಐಬಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಸುಜಾತಾ ದೊಡ್ಡಮನಿ, ತಮ್ಮ ಕಾರ್ಯಕರ್ತರ ಜೊತೆಗೆ ಸೇರಿದ್ದರು. ಈ ವೇಳೆ ಆಗಮಿಸಿದ ಶಾಸಕ ಡಾ.ಚಂದ್ರು ಲಮಾಣಿ ಮತ್ತು ಸುಜಾತ ನಡುವೆ ಐಬಿ ರೂಮ್ ವಿಚಾರದಲ್ಲಿ ವಾಗ್ವಾದ ನಡೆದಿದೆ.
ಗದಗ: ಐಬಿ ರೂಮ್ಗಾಗಿ ಶಾಸಕ ಡಾ.ಚಂದ್ರು ಲಮಾಣಿ (Dr. Chandru Lamani) ಹಾಗೂ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಸುಜಾತಾ ದೊಡ್ಡಮನಿ (Sujatha Doddamani) ಮಧ್ಯೆ ಜಟಾಪಟಿ ನಡೆದ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದಿದೆ. ಮುಂಡರಗಿ ಪಟ್ಟಣದ ಪಿಡಬ್ಯ್ಲೂಡಿ ಇಲಾಖೆಗೆ ಸೇರಿದ ಐಬಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಸುಜತಾ ದೊಡ್ಡಮನಿ, ತಮ್ಮ ಕಾರ್ಯಕರ್ತರ ಜೊತೆಗೆ ಸೇರಿದ್ದರು. ಈ ವೇಳೆ ಆಗಮಿಸಿದ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಬಿಜೆಪಿ ಮುಖಂಡರು, ಇದು ನನಗೆ ಸೇರಿದ ರೂಮ್. ಇಲ್ಲಿಂದ ನೀವು ಹೊರಗೆ ಹೋಗಿ ಎಂದು ಹೇಳಿದ್ದಾರೆ. ಇದರಿಂದಾಗಿ ಕೆರಳಿದ ಸುಜತಾ ದೊಡ್ಡಮನಿ ಹಾಗೂ ಬೆಂಬಲಿಗರು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಮಾತಿಗೆ ಮಾತು ಬೆಳೆದು ಒಂದು ಹಂತದಲ್ಲಿ ಸಹನೆ ಕಳೆದುಕೊಂಡ ಶಾಸಕ ಡಾ.ಚಂದ್ರು ಲಮಾಣಿ ನೀವು ವಸೂಲಿಗಾಗಿ ಬಂದಿದ್ದೀರಿ ಎಂದು ಜರಿದಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಕಾಂಗ್ರೆಸ್ ನಾಯಕಿ ಸುಜತಾ ದೊಡ್ಡಮನಿ ಹಾಗೂ ಬೆಂಬಲಿಗರು ಶಾಸಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜನನಾಯಕರ ಈ ವರ್ತನೆಗೆ ಜನರು ಆಕ್ರೋಶ ಹೊರಹಾಕಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ