AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಬ್ಬದ ದಿನ ಆರಂಭವಾಯ್ತು ಶಿವಣ್ಣನ 131ನೇ ಸಿನಿಮಾ, ಮೊದಲ ಶಾಟ್ ಓಕೆ

ಹಬ್ಬದ ದಿನ ಆರಂಭವಾಯ್ತು ಶಿವಣ್ಣನ 131ನೇ ಸಿನಿಮಾ, ಮೊದಲ ಶಾಟ್ ಓಕೆ

ಮಂಜುನಾಥ ಸಿ.
|

Updated on: Aug 16, 2024 | 5:30 PM

Share

ಶಿವರಾಜ್ ಕುಮಾರ್ ನಟನೆಯ 131ನೇ ಸಿನಿಮಾ ಇಂದು (ಆಗಸ್ಟ್ 16) ವರಮಹಾಲಕ್ಷ್ಮಿ ಹಬ್ಬದಂದು ಅಧಿಕೃತವಾಗಿ ಪ್ರಾರಂಭವಾಗಿದೆ. ಅಪ್ಪ-ಅಮ್ಮ ಹಾಗೂ ಸಹೋದರನ ಸಮಾಧಿಗೆ ನಮಿಸಿ ತಮ್ಮ ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ ಶಿವಣ್ಣ. ಇಲ್ಲಿದೆ ನೋಡಿ ಸಿನಿಮಾದ ಮೊದಲ ಶಾಟ್​ನ ವಿಡಿಯೋ.

ಶಿವರಾಜ್ ಕುಮಾರ್ ನಟನೆಯ 131ನೇ ಸಿನಿಮಾ ವರಮಹಾಲಕ್ಷ್ಮಿ ಹಬ್ಬವಾದ ಇಂದು (ಆಗಸ್ಟ್16) ಆರಂಭವಾಯ್ತು. ಕಂಠೀರವ ಸ್ಟುಡಿಯೋನಲ್ಲಿ ಸಿನಿಮಾದ ಮುಹೂರ್ತ ನೆರವೇರುವ ಮುನ್ನ ಶಿವರಾಜ್ ಕುಮಾರ್ ಅವರು ಡಾ ರಾಜ್​ಕುಮಾರ್, ಪಾರ್ವತಮ್ಮ ಹಾಗೂ ಸಹೋದರ ಪುನೀತ್ ರಾಜ್​ಕುಮಾರ್ ಅವರುಗಳ ಸಮಾಧಿಗೆ ನಮಿಸಿದರು. ಬಳಿಕ ದೇವರ ಪೂಜೆ ಮಾಡಿ, ಸಿನಿಮಾದ ಮೊದಲ ಶಾಟ್ ತೆಗೆಯಲಾಯ್ತು. ಶಿವಣ್ಣನ 131ನೇ ಸಿನಿಮಾವನ್ನು ತಮಿಳಿನ ನಿರ್ದೇಶಕ ಕಾರ್ತಿಕ್ ಅದ್ವೈತ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಟೀಸರ್​ ಒಂದು ಕಳೆದ ತಿಂಗಳೇ ಬಿಡುಗಡೆ ಆಗಿ ಸಖತ್ ವೈರಲ್ ಆಗಿತ್ತು. ಈ ಸಿನಿಮಾ ಪಕ್ಕಾ ರೌಡಿಸಂ ಸಿನಿಮಾ ಆಗಿದ್ದು, ಶಿವಣ್ಣನ ಈ ಹಿಂದಿನ ಸಿನಿಮಾಗಳ ರೆಫರೆನ್ಸ್​ಗಳು ಸಹ ಈ ಸಿನಿಮಾದಲ್ಲಿ ಸಿಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More