ಪೊಲೀಸ್ ಠಾಣೆಗೆ ಬೆಂಕಿಯಿಡಲು ಮುಂದಾಗಿದ್ದ ದ್ರೋಹಿಗಳ ಯಾವುದೇ ಪ್ರಕರಣ ಹಿಂಪಡೆಯುವಂತಿಲ್ಲ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

|

Updated on: Oct 07, 2023 | 4:33 PM

ಶಿವಕುಮಾರ್ ಒಂದೇ ಒಂದು ಪ್ರಕರಣವನ್ನು ವಾಪಸ್ಸು ಪಡೆಯಕೂಡದು ಎಂದ ಜೋಶಿ ತಾವು ವಿಷಯಕ್ಕೆ ಸಂಬಂಧಿಸಿದಂತೆ ಎಡಿಜಿಗೆ ಪತ್ರ ಬರೆಯವುದಾಗಿ ಹೇಳಿದರು. ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ, ರೈತ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ವಾಪಸ್ಸು ಪಡೆಯುವಂತೆ ಪತ್ರ ಬರೆಯಲಾಗಿತ್ತೇ ಹೊರತು ಸಮಾಜದ್ರೋಹಿಗಳ ಮೇಲಿನ ಕೇಸ್ ಗಳನ್ನಲ್ಲ ಎಂದು ಜೋಶಿ ಹೇಳಿದರು.

ಧಾರವಾಡ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಕಿಡಿಕಾರಿದರು. ಕೆಜೆ ಹಳ್ಳಿ, ಡಿಜೆಹಳ್ಳಿಯಲ್ಲಿ ಗಲಭೆಗಳನ್ನು ಸೃಷ್ಟಿಸಿ, ಪೊಲೀಸ್ ಸ್ಟೇಶನ್ ಗೆ ಕೊಳ್ಳಿ ಇಡಲು ಮುಂದಾಗಿದ್ದ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಸಮಾಜದ್ರೋಹಿಗಳ (anti social elements) ಮೇಲೆ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ಸು ತೆಗೆದುಕೊಳ್ಳುವಂತೆ ಪತ್ರ ಬರೆಯುವ ಶಿವಕುಮಾರ್ ರಾಜ್ಯದಲ್ಲಿ ಎಂಥ ಆಡಳಿತ ನೀಡಬಯಸಿದ್ದಾರೆ? ಸಮಾಜ ದ್ರೋಹಿ ಮತ್ತು ದೇಶದ್ರೋಹಿಗಳ ಪರ ಇವರ ಸರ್ಕಾರ ನಿಲ್ಲುತ್ತದೆಯೇ? ಎಂದು ಜೋಶಿ ಪ್ರಶ್ನಿಸಿದರು. ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ, ಶಿವಕುಮಾರ್ ಒಂದೇ ಒಂದು ಪ್ರಕರಣವನ್ನು ವಾಪಸ್ಸು ಪಡೆಯಕೂಡದು ಎಂದ ಜೋಶಿ ತಾವು ವಿಷಯಕ್ಕೆ ಸಂಬಂಧಿಸಿದಂತೆ ಎಡಿಜಿಗೆ ಪತ್ರ ಬರೆಯವುದಾಗಿ ಹೇಳಿದರು. ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ, ರೈತ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ವಾಪಸ್ಸು ಪಡೆಯುವಂತೆ ಪತ್ರ ಬರೆಯಲಾಗಿತ್ತೇ ಹೊರತು ಸಮಾಜದ್ರೋಹಿಗಳ ಮೇಲಿನ ಕೇಸ್ ಗಳನ್ನಲ್ಲ ಎಂದು ಜೋಶಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ