ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ, ವಿಡಿಯೋ ಇಲ್ಲಿದೆ

Updated on: Dec 21, 2025 | 6:54 PM

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಪುಟ್ಟಪನಗುಡಿ ಬೀದಿಯಲ್ಲಿರುವ ಪುರಾತನ ಕಾಲದ ಕಲ್ಯಾಣಿಯ ಆಳದಲ್ಲಿ ಶಿವಲಿಂಗ ಪತ್ತೆಯಾಗಿದೆ. ಸ್ಥಳೀಯ ಸೇರಿಕೊಂಡು ಕಲ್ಯಾಣಿಯಲ್ಲಿ ತುಂಬಿಕೊಂಡಿದ್ದ ಹೂಳು ತೆಗೆದು ಸ್ವಚ್ಚತೆ ಮಾಡುತ್ತಿದ್ದು, ನೀರು ಖಾಲಿಯಾಗುತ್ತಿದ್ದಂತೆ ಕಲ್ಯಾಣಿ ಮಧ್ಯ ಭಾಗದಲ್ಲಿ ಶಿವಲಿಂಗ ಕಂಡುಬಂದಿದೆ. ಶಿವಲಿಂಗ ಕಣ್ಣಿಗೆ ಬೀಳುತ್ತಿದ್ದಂತೆಯೇ ಸ್ಥಳಿಯರು ಅಚ್ಚರಿಗೊಂಡು ಪೂಜೆ ಸಲ್ಲಿಸಿದರು.

ದೇವನಹಳ್ಳಿ, (ಡಿಸೆಂಬರ್ 21): ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ (Bengaluru Rural)   ಜಿಲ್ಲೆ ದೇವನಹಳ್ಳಿ  (Devanahalli) ಪಟ್ಟಣದ ಪುಟ್ಟಪನಗುಡಿ ಬೀದಿಯಲ್ಲಿರುವ ಪುರಾತನ ಕಾಲದ ಕಲ್ಯಾಣಿಯ ಆಳದಲ್ಲಿ ಶಿವಲಿಂಗ ಪತ್ತೆಯಾಗಿದೆ. ಸ್ಥಳೀಯರು ಸೇರಿಕೊಂಡು ಕಲ್ಯಾಣಿಯಲ್ಲಿ ತುಂಬಿಕೊಂಡಿದ್ದ ಹೂಳು ತೆಗೆದು ಸ್ವಚ್ಚತೆ ಮಾಡುತ್ತಿದ್ದು, ನೀರು ಖಾಲಿಯಾಗುತ್ತಿದ್ದಂತೆ ಕಲ್ಯಾಣಿ ಮಧ್ಯ ಭಾಗದಲ್ಲಿ ಶಿವಲಿಂಗ ಕಂಡುಬಂದಿದೆ. ಶಿವಲಿಂಗ ಕಣ್ಣಿಗೆ ಬೀಳುತ್ತಿದ್ದಂತೆಯೇ ಸ್ಥಳಿಯರು ಅಚ್ಚರಿಗೊಂಡು ಪೂಜೆ ಸಲ್ಲಿಸಿದರು.

Published on: Dec 21, 2025 06:53 PM