MP meets Dy CM: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಯಾದ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ
ಕೆಲಸ ಕಳೆದುಕೊಂಡವರು ಭೂಮಿ ನೀಡಿದ ರೈತರಾಗಿರುವುದರಿಂದ ಅನ್ಯಾಯವಾಗಬಾರದು ಅಂತ ಹೇಳಿದ್ದಕ್ಕೆ ಉಪ ಮುಖ್ಯಮಂತ್ರಿಗಳಿಂದ ಪಾಸಿಟಿವ್ ಪ್ರತಿಕ್ರಿಯೆ ಬಂದಿದೆ ಎಂದು ರಾಘವೇಂದ್ರ ಹೇಳಿದರು.
ಬೆಂಗಳೂರು: ನಿಮಗೆ ನೆನಪಿದೆ, ಮೊನ್ನೆಯಷ್ಟೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು (BS Yediyurappa) ಭೇಟಿಯಾಗಿದ್ದರು. ಅಧಿಕಾರಕ್ಕೆ ಬಂದ ಬಳಿಕ ಶಿವಕುಮಾರ್ ವಿರೋಧ ಪಕ್ಷದ ನಾಯಕರ ವಿರುದ್ಧ ಟೀಕೆಗಳನ್ನು ಮಾಡುತ್ತಿಲ್ಲ. ಅವರ ಈ ಧೋರಣೆ ಶಿವಮೊಗ್ಗದ ಬಿಜೆಪಿ ಸಂಸದ ಮತ್ತು ಯಡಿಯೂರಪ್ಪನವರ ಪುತ್ರ ಬಿವೈ ರಾಘವೇಂದ್ರ (BY Raghavendra) ಅವರಿಗೆ ಬಹಳ ಮೆಚ್ಚಿಕೆಯಾಗಿದೆ. ಇಂದು ಶಿವಕುಮಾರ್ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರಾಘವೇಂದ್ರ, ಉಪ ಮುಖ್ಯಮಂತ್ರಿಗಳನ್ನು ಮನಸಾರೆ ಹೊಗಳಿದರು. ಸೌಜನ್ಯದ ಭೇಟಿಗಾಗಿ ಬಂದಿದ್ದಾಗಿ ಹೇಳಿದ ಸಂಸದ, ಷಿಕಾರಿಪುರದಲ್ಲಿ ಕ್ಯಾಟಲ್ ಫೀಡ್ ತಯಾರಿಸುತ್ತಿದ್ದ ಫ್ಯಾಕ್ಟರಿಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 85 ಜನ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವ ವಿಷಯವನ್ನು ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರು ಭೂಮಿ ನೀಡಿದ ರೈತರಾಗಿರುವುದರಿಂದ ಅನ್ಯಾಯವಾಗಬಾರದು ಅಂತ ಹೇಳಿದ್ದಕ್ಕೆ ಅವರಿಂದ ಪಾಸಿಟಿವ್ ಪ್ರತಿಕ್ರಿಯೆ ಬಂದಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ