ಹಸೆಮಣೆ ಏರಿದ ಮರುದಿನವೇ ಮದುಮಗ ಸಾವು: ಹೊಸ ಜೀವನ ಮಾಡಲು ಬಿಡ್ಲಿಲ್ಲ ವಿಧಿ
ಮದುವೆಯಾಗಿ ಹೊಸ ಬಾಳನ್ನು ಆರಂಭಿಸಬೇಕಿದ್ದ ಯುವಕನೊಬ್ಬ, ಹಸೆಮಣೆ ಏರಿದ ಮರುದಿನವೇ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತಪುರದ ನಿವಾಸಿಯಾಗಿರುವ ರಮೇಶ್(30) ಮೃತ ದುರ್ದೈವಿ. ಮದುವೆಯ ಬಳಿಕ ಹೆಂಡ್ತಿ ಮನೆಗೆ ಹೋಗಿದ್ದು, ಅಲ್ಲಿ ದೇವರ ದರ್ಶನ ಪಡೆಯಲು ತೆರಳಿದ ಸಂದರ್ಭದಲ್ಲಿ ಯುವಕನಿಗೆ ಹೃದಯಾಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ, ದುರದೃಷ್ಟವಶಾತ್ ಮಾರ್ಗ ಮಧ್ಯದಲ್ಲಿಯೇ ರಮೇಶ್ ಕೊನೆಯುಸಿರೆಳೆದಿದ್ದಾನೆ.
ಶಿವಮೊಗ್ಗ, (ಡಿಸೆಂಬರ್ 03): ಮದುವೆಯಾಗಿ ಹೊಸ ಬಾಳನ್ನು ಆರಂಭಿಸಬೇಕಿದ್ದ ಯುವಕನೊಬ್ಬ, ಹಸೆಮಣೆ ಏರಿದ ಮರುದಿನವೇ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತಪುರದ ನಿವಾಸಿಯಾಗಿರುವ ರಮೇಶ್(30) ಮೃತ ದುರ್ದೈವಿ. ಮದುವೆಯ ಬಳಿಕ ಹೆಂಡ್ತಿ ಮನೆಗೆ ಹೋಗಿದ್ದು, ಅಲ್ಲಿ ದೇವರ ದರ್ಶನ ಪಡೆಯಲು ತೆರಳಿದ ಸಂದರ್ಭದಲ್ಲಿ ಯುವಕನಿಗೆ ಹೃದಯಾಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ, ದುರದೃಷ್ಟವಶಾತ್ ಮಾರ್ಗ ಮಧ್ಯದಲ್ಲಿಯೇ ರಮೇಶ್ ಕೊನೆಯುಸಿರೆಳೆದಿದ್ದಾನೆ. ಇದರಿಂದ ಮದುವೆ ಸಂಭ್ರಮದ ಮನೆಯಲ್ಲಿ ಸೂತಕ ಆವರಿಸಿದ್ದು, ಸಂಬಂಧಿಕರು ಕಣ್ನೀರಿಡುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಬಗ್ಗೆ ಸಂಬಂಧಿಕರು ಹಂಚಿಕೊಂಡಿದ್ದು ಹೀಗೆ
Published on: Dec 03, 2025 07:42 PM
