Shivananda Patil: ಅಪ್ಪನ ಸರ್ಕಾರಿ ಕಾರಿನಲ್ಲಿ ಸಕ್ಕರೆ ಖಾತೆ ಸಚಿವರ ಪುತ್ರಿ ಸಂಚಾರ
ಸದಾಶಿವನಗರದಲ್ಲಿ ಸಚಿವ ಶಿವಾನಂದ ಪಾಟೀಲ್ರ ಕಾರಲ್ಲಿ ಪುತ್ರಿ ಸಂಯುಕ್ತ ಪಾಟೀಲ್ ಓಡಾಡ್ತಿರೋ ದೃಶ್ಯ ಕಂಡು ಬಂದಿದೆ. ಸರ್ಕಾರಿ ವಾಹನ ಸರ್ಕಾರಿ ಕೆಲಸಕ್ಕೆ ಸೀಮಿತವಾಗದೇ ಕುಟುಂಬದ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ.
ಜವಳಿ ಮತ್ತು ಸಕ್ಕರೆ ಖಾತೆ ಸಚಿವರಾದ ಶಿವಾನಂದ ಪಾಟೀಲ್ ಅವರ ಸರ್ಕಾರಿ ಕಾರಿನಲ್ಲಿ ಅವರ ಮಗಳು ದರ್ಬಾರ್ ಮಾಡ್ತಿದ್ದಾರೆ. ಟಿವಿ9 ಕ್ಯಾಮರಾ ನೋಡುತ್ತಿದ್ದಂತೆ ಕಕ್ಕಾಬಿಕ್ಕಿಯಾಗಿದ್ದಾರೆ. ಸದಾಶಿವನಗರದಲ್ಲಿ ಸಚಿವರ ಕಾರಲ್ಲಿ ಪುತ್ರಿ ಸಂಯುಕ್ತ ಪಾಟೀಲ್ ಓಡಾಡ್ತಿರೋ ದೃಶ್ಯ ಕಂಡು ಬಂದಿದೆ. ಸರ್ಕಾರಿ ವಾಹನ ಸರ್ಕಾರಿ ಕೆಲಸಕ್ಕೆ ಸೀಮಿತವಾಗದೇ ಕುಟುಂಬದ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ. ನಿಯಮಗಳ ಪ್ರಕಾರ, ಸಚಿವರು ಸಹ ಸರ್ಕಾರಿ ನೌಕರರ ಸಾಲಿಗೆ ಸೇರುವುದರಿಂದ ಅವರಿಗೆ ಸರ್ಕಾರದ ಕಾರನ್ನು ನೀಡಲಾಗುತ್ತೆ. ಈ ರೀತಿ ನೀಡಲಾದ ಕಾರನ್ನು ಕೇವಲ ಅವರು ಮಾತ್ರ ಬಳಸಬೇಕು. ಬೇರೆಯವರು ಬಳಸಬಾರದು. ಆದ್ರೆ ಇಲ್ಲಿ ಸಚಿವರ ಮಗಳು ಕಾರಿನಲ್ಲಿ ಕೂತು ಸದಾಶಿವನಗರದ ರೌಂಡ್ಸ್ ಹಾಕಿದ್ದಾರೆ.