ಶಿವರಾಜ್ಕುಮಾರ್ ವಿಶೇಷ ಮನವಿ; ಇದನ್ನು ಅಭಿಮಾನಿಗಳು ನಡೆಸಿಕೊಡ್ತಾರಾ?
ಬೆಂಗಳೂರಿನ ಶೇಷಾದ್ರಿಪುರದ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದಲ್ಲಿ ಇಂದು ಪುನೀತ್ ಸ್ಮರಣಾಂಜಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಶಿವರಾಜ್ಕುಮಾರ್ ಅವರು ಮನವಿ ಒಂದನ್ನು ಮಾಡಿಕೊಂಡರು.
ಪುನೀತ್ ರಾಜ್ಕುಮಾರ್ ನಿಧನ ಹೊಂದಿದ್ದಾರೆ ಎನ್ನುವ ವಿಚಾರವನ್ನು ಇನ್ನೂ ಯಾರಿಂದಲೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಈ ಕಾರಣಕ್ಕೆ ಸಾಕಷ್ಟು ಮಂದಿ ಈಗಲೂ ಕಣ್ಣೀರು ಹಾಕುತ್ತಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆಯೂ ವರದಿ ಆಗಿದೆ. ಇದು ಶಿವರಾಜ್ಕುಮಾರ್ ಅವರಿಗೆ ಸಾಕಷ್ಟು ನೋವು ತಂದಿದೆ. ಈ ರೀತಿ ಮಾಡಿಕೊಳ್ಳದಂತೆ ಶಿವರಾಜ್ಕುಮಾರ್ ಅವರು ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ. ಇಂದು (ಡಿಸೆಂಬರ್ 5) ಶಿವರಾಜ್ಕುಮಾರ್ ಈ ಬಗ್ಗೆ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರದ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದಲ್ಲಿ ಇಂದು ಪುನೀತ್ ಸ್ಮರಣಾಂಜಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅಪ್ಪು ನೆನಪುಗಳನ್ನು ಮೆಲುಕು ಹಾಕಿದ ಶಿವರಾಜ್ಕುಮಾರ್ ಅವರು ಬಿಕ್ಕಿ ಬಿಕ್ಕಿ ಅತ್ತರು. ಅಲ್ಲದೆ, ಯಾರೂ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವಿ ಮಾಡಿಕೊಂಡರು.
ಇದನ್ನೂ ಓದಿ: ಶಿವರಾಜ್ಕುಮಾರ್ ಕಂಠದಲ್ಲಿ ಮೂಡಿ ಬಂದ ‘ಕನ್ನಡಿಗ’ ಹಾಡು; ರವಿಚಂದ್ರನ್ ಸಿನಿಮಾಗೆ ಶಿವಣ್ಣನ ಬೆಂಬಲ
Published on: Dec 05, 2021 05:50 PM