12 ಲಕ್ಷ ಬೆಲೆಯ ಡೈಮಂಡ್ ಗಣಪನ ದರ್ಶನ ಪಡೆದ ಶಿವಣ್ಣ
ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ಮುಕ್ತರಾಗಿದ್ದಾರೆ. ಅವರು ಚಿಕಿತ್ಸೆ ಪಡೆದು ಕ್ಯಾನ್ಸರ್ನಿಂದ ಹೊರ ಬಂದಿದ್ದಾರೆ. ಹೀಗಿರುವಾಗಲೇ ಡೈಮಂಡ್ ಗಣಪನ ದರ್ಶನವನ್ನು ಶಿವಣ್ಣ ಹಾಗೂ ಗೀತಕ್ಕೆ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ದರ್ಶನ್ 12 ಲಕ್ಷ ಬೆಲೆಯ ಗಣಪನ ದರ್ಶನ ಪಡೆದಿದ್ದು ಕಾಣಿಸಿದೆ.
ಎಲ್ಲೆಲ್ಲೂ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ನಟ ಶಿವರಾಜ್ಕುಮಾರ್ ಕೂಡ ಹಬ್ಬ ಆಚರಿಸಿದ್ದಾರೆ. ಈಗ ಅವರು ಬೆಂಗಳೂರಿನ ರಾಜಾಜಿನಗರದ ಮಿಲ್ಕ್ ಕಾಲೋನಿಯಲ್ಲಿ 12 ಲಕ್ಷ ರೂಪಾಯಿ ಬೆಲೆಯ ಡೈಮಂಡ್ ಗಣಪನ ದರ್ಶನ ಮಾಡಿದ್ದಾರೆ. ಈ ವೇಳೆ ಗೀತಾ ಶಿವರಾಜ್ಕುಮಾರ್ ಕೂಡ ಇದ್ದರು. ಶಿವಣ್ಣ ಅವರ ಸರ್ಜರಿ ಸಕ್ಸಸ್ ಆಗಲಿ ಎಂದು ಸ್ವಸ್ತಿಕ್ ಯುವಕರ ಸಂಘ ಬೇಡಿಕೊಂಡಿತ್ತು. ಈ ಸಂಘದವರು ಇಟ್ಟ 12 ಲಕ್ಷ ಬೆಲೆಯ ಗಣಪನ ದರ್ಶನ ಮಾಡಿ, ಪೂಜೆ ಸಲ್ಲಿಸಿದ್ದಾರೆ ಶಿವಣ್ಣ ದಂಪತಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
