‘ಅಪ್ಪು ನಮ್ಮನ್ನು ಸೇರಿಸಿದ್ರು’; ವಿವಾಹದ ಬಳಿಕ ಮೊದಲ ರಿಯಾಕ್ಷನ್ ಕೊಟ್ಟ ಅನುಶ್ರೀ
ಅನುಶ್ರೀ ಅವರು ರೋಷನ್ ಹೆಸರಿನ ಹುಡುಗನ ಮದುವೆ ಆಗಿದ್ದಾರೆ. ಈ ಮದುವೆ ಅದ್ದೂರಿಯಾಗಿ ನೆರವೇರಿದೆ. ಈ ವಿವಾಹದ ಬಳಿಕ ಅನುಶ್ರೀ ಅವರು ಫುಲ್ ಖುಷ್ ಆಗಿದ್ದಾರೆ. ಅನುಶ್ರೀ ಮದುವೆ ಆದ ರೋಷನ್ ಬಗ್ಗೆ ಹೆಚ್ಚಿನ ವಿಚಾರ ತಿಳಿದಿಲ್ಲ. ಈ ಬಗ್ಗೆ ಅನುಶ್ರೀ ಅವರು ಮಾತನಾಡಿದ್ದಾರೆ.
ಅನುಶ್ರೀ ಹಾಗೂ ರೋಷನ್ ಮಧ್ಯೆ ವಿವಾಹ ನೆರವೇರಿದೆ. ಸರಳವಾಗಿ ಈ ಮದುವೆ ನಡೆದಿದೆ. ವಿವಾಹದ ಬಳಿಕ ಅನುಶ್ರೀ ಅವರು ಮೊದಲ ರಿಯಾಕ್ಷನ್ ಕೊಟ್ಟರು. ‘ರೋಷನ್ ರಾಮಮೂರ್ತಿ. ಕುಶಾಲ ನಗರದವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ ಅನುಶ್ರೀ. ‘ರೋಷನ್ ಅಪ್ಪು ಸರ್ ಅಭಿಮಾನಿ. ಪುನೀತ ಪರ್ವದಲ್ಲಿ ನಾನು ಅವರನ್ನು ಭೇಟಿ ಮಾಡಿದೆ. ಪುನೀತ್ ಅವರೇ ನಮ್ಮನ್ನು ಸೇರಿಸಿದ್ದಾರೆ’ ಎಂದಿದ್ದಾರೆ ಅನುಶ್ರೀ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

