‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಭರ್ಜರಿ ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ

Updated on: Mar 31, 2025 | 10:44 AM

ಶಿವರಾಜ್​ಕುಮಾರ್ ಅವರು ಕ್ಯಾನ್ಸರ್​ ಮುಕ್ತರಾಗಿ ಬಂದಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈಗ ಅವರು ವಿವಿಧ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರ ಕಡೆಯಿಂದ ಒಂದು ಬಿಗ್ ಅಪ್​​ಡೇಟ್ ಬಂದಿದೆ. ‘ಓಂ 2’ ಸಿನಿಮಾ ಬರಲಿದೆ ಎಂದು 45 ಚಿತ್ರದ ಟ್ರೇಲರ್ ಲಾಂಚ್​ನಲ್ಲಿ ಹೇಳಿದ್ದಾರೆ.

‘ಓಂ’ ಸಿನಿಮಾ ರಿಲೀಶ್ ಆಗಿ 3 ದಶಕಗಳು ಕಳೆದಿವೆ. ಈ ಚಿತ್ರವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿದ್ದರೆ, ಶಿವರಾಜ್​ಕುಮಾರ್ ಅವರು ನಟಿಸಿದ್ದರು. ಶಿವಣ್ಣ (Shivaraj Kumar) ಅವರಿಗೆ ಬೇರೆಯದೇ ಖದರ್ ಕೊಟ್ಟ ಸಿನಿಮಾ ಇದು. ಈಗ ಶಿವಣ್ಣ ಹಾಗೂ ಉಪೇಂದ್ರ ‘45’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ‘ಓಂ 2’ ಚಿತ್ರದ ಬಗ್ಗೆ ಕೇಳಲಾಯಿತು. ಈ ವೇಳೆ ಮಾತನಾಡಿದ ಉಪೇಂದ್ರ, ‘ನಾವು ಸರ್​ಪ್ರೈಸ್ ಇಟ್ಟಿದ್ದೇವೆ. ಈಗಲೇ ರಿವೀಲ್ ಮಾಡಿದರೆ ಹೇಗೆ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More