ರಾಯಚೂರು ಅಭಿಮಾನಿಗಳ ಬಗ್ಗೆ ಶಿವಣ್ಣ ಕಂಪ್ಲೇಂಟ್; ಹೌದೆಂದ ಫ್ಯಾನ್ಸ್
ರಾಯಚೂರು ಅಭಿಮಾನಿಗಳು ಶಿವಣ್ಣನ ನೋಡಲು ಬೆಂಗಳೂರಿಗೆ ಬರುತ್ತಾರೆ. ಅಲ್ಲಿ ಬಂದಾಗ ಸಿಹಿ ತಿನಿಸಿ, ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ ಅಷ್ಟೇ. ತಮ್ಮ ಊರಿನಲ್ಲಿರುವ ಕಷ್ಟವನ್ನು ಹೇಳಿಕೊಳ್ಳುವುದಿಲ್ಲ ಅನ್ನೋದು ಶಿವಣ್ಣನ ದೂರು.
ರಾಯಚೂರು ನಗರದಲ್ಲಿ ‘ವೇದ’ (Vedha Movie) ಸಿನಿಮಾದ ಇವೆಂಟ್ ನಡೆದಿದೆ. ಶಿವರಾಜ್ಕುಮಾರ್ (Shivarajkumar), ಪತ್ನಿ ಗೀತಾ ಸೇರಿದಂತೆ ಕಾರ್ಯಕ್ರಮದಲ್ಲಿ ಅನೇಕರು ಭಾಗಿ ಆಗಿದ್ದರು. ಈ ವೇಳೆ ಶಿವರಾಜ್ಕುಮಾರ್ ಅವರು ವೇದಿಕೆ ಮೇಲೆ ಮಾತನಾಡುತ್ತಾ ರಾಯಚೂರು ಅಭಿಮಾನಿಗಳ ಬಗ್ಗೆ ಒಂದು ದೂರು ಹೇಳಿದ್ದಾರೆ. ರಾಯಚೂರು ಅಭಿಮಾನಿಗಳು ಶಿವಣ್ಣನ ನೋಡಲು ಬೆಂಗಳೂರಿಗೆ ಬರುತ್ತಾರೆ. ಅಲ್ಲಿ ಬಂದಾಗ ಸಿಹಿ ತಿನಿಸಿ, ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ ಅಷ್ಟೇ. ತಮ್ಮ ಊರಿನಲ್ಲಿರುವ ಕಷ್ಟವನ್ನು ಹೇಳಿಕೊಳ್ಳುವುದಿಲ್ಲ ಅನ್ನೋದು ಶಿವಣ್ಣನ ದೂರು. ಇದನ್ನು ಫ್ಯಾನ್ಸ್ ಒಪ್ಪಿದ್ದಾರೆ.
Published on: Dec 04, 2022 08:23 AM