'ರಾಯರ ಕುರಿತಾಗಿ ಒಳ್ಳೆಯ ಕಥೆ ಬಂದರೆ ನಾನು ಖಂಡಿತ ಮಾಡುತ್ತೇನೆ' ಎಂದ ನಟ ಶಿವಣ್ಣ

‘ರಾಯರ ಕುರಿತಾಗಿ ಒಳ್ಳೆಯ ಕಥೆ ಬಂದರೆ ನಾನು ಖಂಡಿತ ಮಾಡುತ್ತೇನೆ’ ಎಂದ ನಟ ಶಿವಣ್ಣ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 04, 2022 | 6:00 AM

ನಟ ಶಿವರಾಜ್​ ಕುಮಾರ್​ ಇಂದು (ಡಿ. 3) ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದುಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ರಾಯರ ಕುರಿತು ಚಿತ್ರ ಮಾಡುವುದಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್​ವುಡ್​ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ (Shivarajkumar) ಇಂದು (ಡಿ. 3) ‘ವೇದ’ ಚಿತ್ರತಂಡದೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದುಕೊಂಡಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ರಾಯರ ಆಶೀರ್ವಾದ ಚಿತ್ರರಂಗಕ್ಕೆ ಬಂದು 36 ವರ್ಷ ಕಳೆದಿವೆ. 125ನೇ ಚಿತ್ರವಾದ ವೇದ ನಮ್ಮ ಬ್ಯಾನರ್​​ ಅಡಿಯಲ್ಲಿ ಬರುತ್ತಿರುವುದು ಒಂದು ಹೆಮ್ಮೆ ಇದೆ. ಅದರಲ್ಲಿಯೂ ಎ. ಹರ್ಷ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಒಂದು ಧನಾತ್ಮಕ ಭಾವನೆ ಇದೆ’ ಎಂದರು. ಇದೇ ವೇಳೆ ರಾಯರ ಕುರಿತು ಚಿತ್ರ ಮಾಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, ‘ಆ ಕುರಿತು ಒಳ್ಳೆಯ ಕಥೆ ಬಂದರೆ ನಾನು ಖಂಡಿತ ಮಾಡುವುದಕ್ಕೆ ಇಷ್ಟು ಪಡುತ್ತೇನೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.