Rishab Shetty Exclusive: ‘ವರಾಹ ರೂಪಂ’ ಸಾಂಗ್ ವಿವಾದದ ಕುರಿತು ನಟ ರಿಷಬ್ ಶೆಟ್ಟಿ ಹೇಳಿದ್ದು ಹೀಗೆ
'ಕಾಂತಾರ' ಚಿತ್ರದ ಜೀವಾಳವಾಗಿರುವ 'ವರಾಹ ರೂಪಂ' ಮೂಲ ಹಾಡನ್ನು ಬಳಸಲು ಅವಕಾಶ ಸಿಕ್ಕಿದೆ. ಈ ಕುರಿತಾಗಿ ಟಿವಿ 9 ಜೊತೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.
‘ಕಾಂತಾರ’ (Kantara Movie) ಚಿತ್ರದ ಮೇಲೆ ಅದ್ಯಾರ ಕಣ್ಣು ಬಿದ್ದಿತೋ ಗೊತ್ತಿಲ್ಲ. ಒಂದಿಲ್ಲೊಂದು ವಿವಾದಗಳಿಗೆ ಸಿಲುಕಿಕೊಂಡಿತ್ತು. ಸದ್ಯ ‘ಕಾಂತಾರ’ ಚಿತ್ರದ ಜೀವಾಳವಾಗಿರುವ ‘ವರಾಹ ರೂಪಂ’ ಮೂಲ ಹಾಡನ್ನು ಬಳಸಲು ಅವಕಾಶ ಸಿಕ್ಕಿದೆ. ಅಲ್ಲಿಗೆ ಕಾನೂನು ಹೋರಾಟದಲ್ಲಿ ‘ಕಾಂತಾರ’ ಚಿತ್ರಕ್ಕೆ ಜಯ ಸಿಕ್ಕಂತಾಗಿದೆ. ಈ ಕುರಿತಾಗಿ ಟಿವಿ 9 ಜೊತೆ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಮಾತನಾಡಿದ್ದು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ‘ಕೋರ್ಟ್ ತಿರ್ಮಾನದ ಬಗ್ಗೆ ಖುಷಿಯಿದೆ. ಇಂದಿನಿಂದ ಚಿತ್ರಮಂದಿರ, ಓಟಿಟಿ, ಯೂಟ್ಯೂಬ್, ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲ ವೇದಿಕೆಗಳಲ್ಲೂ ಮೂಲ ‘ವರಾಹ ರೂಪಂ’ ಹಾಡು ಪುನಃ ಕಾಣಬಹುದು’ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos