Shivarajkumar: ‘ಆ ರೀತಿ ಹೇಳಿದ್ದು ಅವರ ದೊಡ್ಡತನ’: ರವಿಚಂದ್ರನ್​ ಬಗ್ಗೆ ಮಾತನಾಡಿದ ಶಿವರಾಜ್​ಕುಮಾರ್​

Edited By:

Updated on: Jul 19, 2023 | 6:15 PM

Kichcha Sudeep Controversy: ರವಿಚಂದ್ರನ್​ ಮತ್ತು ಶಿವರಾಜ್​ಕುಮಾರ್​ ಅವರ ನಡುವೆ ಬಹಳ ಕಾಲದಿಂದಲೂ ಬಾಂಧವ್ಯ ಇದೆ. ಸುದೀಪ್​-ಎಂಎನ್​ ಕುಮಾರ್​ ನಡುವಿನ ವಿವಾದ ಪರಿಹರಿಸಲು ಈ ಹಿರಿಯ ನಟರು ಮುಂದಾಗಿದ್ದಾರೆ.

ನಟ ಕಿಚ್ಚ ಸುದೀಪ್​ (Kichcha Sudeep) ಮತ್ತು ನಿರ್ಮಾಪಕ ಎಂಎನ್​ ಕುಮಾರ್​ ನಡುವಿನ ವಿವಾದವನ್ನು ಬಗೆಹರಿಸಲು ಕನ್ನಡ ಚಿತ್ರರಂಗದ ಹಿರಿಯ ನಟರ ಮಧ್ಯಪ್ರವೇಶ ಆಗಿದೆ. ಈ ವಿಚಾರದಲ್ಲಿ ಶಿವರಾಜ್​ಕುಮಾರ್​ ಅವರಿಗೆ ಮೊದಲು ಲೆಟರ್​ ನೀಡಿ ಎಂದು ರವಿಚಂದ್ರನ್​ (Ravichandran) ಹೇಳಿದ್ದರು. ಅವರ ಮಾತಿಗೆ ಇಂದು (ಜುಲೈ 19) ಶಿವರಾಜ್​ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ‘ರವಿ ಅವರು ಆ ರೀತಿ ಹೇಳಿದ್ದು ಅವರ ದೊಡ್ಡತನ. ಅವರು ನನಗಿಂತ ಸೀನಿಯರ್​. ಅವರ ತಂದೆ ದೊಡ್ಡ ಪ್ರೊಡ್ಯೂಸರ್​ ಆಗಿದ್ದರು. ಅವರಿಗೆ ಅಪ್ಪಾಜಿ ಸಾಹುಕಾರರು ಎನ್ನುತ್ತಿದ್ದರು. ಈಗ ನಾನು ರವಿ ಸರ್​ ಅವರ ಸಲಹೆ ಕೇಳುತ್ತೇನೆ’ ಎಂದು ಶಿವಣ್ಣ (Shivarajkumar) ಹೇಳಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More