ಅಪ್ಪು ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ಶಿವರಾಜ್​ಕುಮಾರ್​

Edited By:

Updated on: Nov 01, 2021 | 2:30 PM

ಸಾಕಷ್ಟು ಜನರು ಪುನೀತ್​ ಸಾವಿನ ಸುದ್ದಿ ಕೇಳಿ ಮೃತಪಟ್ಟ ಬಗ್ಗೆಯೂ ವರದಿ ಆಗಿದೆ. ಈಗ ಈ ಎಲ್ಲಾ ವಿಚಾರಗಳ ಬಗ್ಗೆ ಶಿವರಾಜ್​ಕುಮಾರ್​ ಅವರು ಮಾತನಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ನಿಧನ ವಾರ್ತೆಯಿಂದ ಅತಿ ಹೆಚ್ಚು ನೊಂದವರು ಶಿವರಾಜ್​ಕುಮಾರ್​. ಇದರ ಜತೆಗೆ ಅಭಿಮಾನಿಗಳು ತುಂಬಾನೇ ಬೇಸರಗೊಂಡಿದ್ದಾರೆ. ಸಾಕಷ್ಟು ಜನರು ಪುನೀತ್​ ಸಾವಿನ ಸುದ್ದಿ ಕೇಳಿ ಮೃತಪಟ್ಟ ಬಗ್ಗೆಯೂ ವರದಿ ಆಗಿದೆ. ಈಗ ಈ ಎಲ್ಲಾ ವಿಚಾರಗಳ ಬಗ್ಗೆ ಶಿವರಾಜ್​ಕುಮಾರ್​ ಅವರು ಮಾತನಾಡಿದ್ದಾರೆ. ಅಲ್ಲದೆ, ಅವರು ಅಭಿಮಾನಿಗಳ ಜತೆ ವಿಶೇಷ ಮನವಿ ಕೂಡ ಮಾಡಿಕೊಂಡಿದ್ದಾರೆ.

‘ಅಭಿಮಾನಿಗಳು ನೋವಿನಲ್ಲಿದ್ದಾರೆ. ಅದಕ್ಕೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ನಮಗಿಂತ ಹತ್ತುಪಟ್ಟು ನೋವನ್ನು ಅವರು ಅನುಭವಿಸುತ್ತಿದ್ದಾರೆ. ನಾವು ಪುಣ್ಯ ಮಾಡಿದ್ದೆವು. ಎಲ್ಲರ ಪ್ರೀತಿ ವಿಶ್ವಾಸ ನೋಡಿದರೆ ಏನು ಹೇಳೋಕೂ ಆಗಲ್ಲ’ ಎಂದು ಶಿವರಾಜ್​ಕುಮಾರ್ ಹೇಳಿದ್ದಾರೆ. ಇದರ ಜತೆಗೆ ಅವರು ವಿಶೇಷ ಮನವಿ ಕೂಡ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾನ್ಸ್​​ಗೆ ಸರ್​ಪ್ರೈಸ್​ ನೀಡಿದ್ದ ಪುನೀತ್​; ಶಾಕ್​ಗೆ ಒಳಗಾದ ಅಭಿಮಾನಿಗಳನ್ನು ಅಪ್ಪು ಸಮಾಧಾನ ಮಾಡಿದ ರೀತಿ ನೋಡಿ

ಪುನೀತ್​ ರಾಜ್​ಕುಮಾರ್​ ಒಪ್ಪಿಕೊಂಡಿದ್ದ ಸಿನಿಮಾಗಳು ಯಾವವು? ಇಲ್ಲಿದೆ ಸಂಪೂರ್ಣ ಮಾಹಿತಿ

Loading...
Unable to load recommendations.
Follow Us
TV9 Web

TV9 Kannada

Read More