AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾನ್ಸ್​​ಗೆ ಸರ್​ಪ್ರೈಸ್​ ನೀಡಿದ್ದ ಪುನೀತ್​; ಶಾಕ್​ಗೆ ಒಳಗಾದ ಅಭಿಮಾನಿಗಳನ್ನು ಅಪ್ಪು ಸಮಾಧಾನ ಮಾಡಿದ ರೀತಿ ನೋಡಿ

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ಸಂತೋಷ್​​​ ಆನಂದ್​ರಾಮ್​​ ನಿರ್ದೇಶನ ಮಾಡಿದ್ದ ‘ಯುವರತ್ನ’ ಸಿನಿಮಾ ಕೊವಿಡ್​ ಎರಡನೇ ಅಲೆ ಕಾಣಿಸಿಕೊಳ್ಳುವುದಕ್ಕೂ ಮೊದಲು ರಿಲೀಸ್​ ಆಗಿತ್ತು. ಈ ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರ ನೀಡಲಾಗಿತ್ತು.

ಫ್ಯಾನ್ಸ್​​ಗೆ ಸರ್​ಪ್ರೈಸ್​ ನೀಡಿದ್ದ ಪುನೀತ್​; ಶಾಕ್​ಗೆ ಒಳಗಾದ ಅಭಿಮಾನಿಗಳನ್ನು ಅಪ್ಪು ಸಮಾಧಾನ ಮಾಡಿದ ರೀತಿ ನೋಡಿ
ಸರ್​ಪ್ರೈಸ್ ನೀಡಿದ್ದ ಪುನೀತ್
TV9 Web
| Edited By: |

Updated on: Nov 01, 2021 | 1:24 PM

Share

ಪುನೀತ್​ ರಾಜ್​ಕುಮಾರ್​ ಚಿನ್ನದಂತ ಮನುಷ್ಯ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಪುನೀತ್ ಗುಣ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವ್ಯಕ್ತಿಗಳಿಗೂ ಇಷ್ಟವಾಗುತ್ತದೆ. ಈ ಕಾರಣಕ್ಕೆ ಅಪ್ಪು​ ಮೃತಪಟ್ಟಾಗ ಅವರನ್ನು ನೋಡೋಕೆ ಲಕ್ಷಾಂತರ ಅಭಿಮಾನಿಗಳು ಬಂದು ಅಂತಿಮ ದರ್ಶನ ಪಡೆದಿದ್ದರು. ಪುನೀತ್​ ಮೃತಪಟ್ಟ ನಂತರ ಅವರ ಹಳೆಯ ವಿಡಿಯೋಗಳು ಸಾಕಷ್ಟು ವೈರಲ್​ ಆಗುತ್ತಿದೆ. ಪುನೀತ್​ ಸರಳತೆ ಸಾರುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ಪೈಕಿ ‘ಯುವರತ್ನ’ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಶೂಟ್​ ಮಾಡಿದ್ದ ವಿಡಿಯೋ ಕೂಡ ಒಂದು​. ಅಪ್ಪುನನ್ನು ನೋಡಬೇಕು ಎಂದು ಅನೇಕ ವರ್ಷಗಳು ಕಾದುಕೂತ ಅಭಿಮಾನಿಗಳಿಗೆ ಪುನೀತ್​ ದರ್ಶನ ನೀಡಿದ್ದರು. ಇದನ್ನು ಅಭಿಮಾನಿಗಳಿಗೆ ನಂಬಬೇಕೋ ಅಥವಾ ಬಿಡಬೇಕೋ ಎಂಬುದು ಗೊತ್ತಾಗಿರಲಿಲ್ಲ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ಸಂತೋಷ್​​​ ಆನಂದ್​ರಾಮ್​​ ನಿರ್ದೇಶನ ಮಾಡಿದ್ದ ‘ಯುವರತ್ನ’ ಸಿನಿಮಾ ಕೊವಿಡ್​ ಎರಡನೇ ಅಲೆ ಕಾಣಿಸಿಕೊಳ್ಳುವುದಕ್ಕೂ ಮೊದಲು ರಿಲೀಸ್​ ಆಗಿತ್ತು. ಈ ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರ ನೀಡಲಾಗಿತ್ತು. ಇಡೀ ಚಿತ್ರತಂಡ ರಾಜ್ಯಾದ್ಯಂತ ಸಂಚರಿಸಿ ಪ್ರಚಾರ ಮಾಡಿತ್ತು. ಇದರ ಜತೆಗೆ ಪುನೀತ್​ ಸಾಕಷ್ಟು ಅಭಿಮಾನಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದರು. ಅದೂ ಸರ್​ಪ್ರೈಸ್​ ಆಗುವ ರೀತಿಯಲ್ಲಿ.

ಈ ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್​ ಮಾರ್ಚ್​ 21ರಂದು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಪುನೀತ್ ಎಂದರೆ ಯಾಕೆ ಇಷ್ಟ ಮತ್ತು ಎಷ್ಟು ಇಷ್ಟ ಎಂಬುದನ್ನು ಅಭಿಮಾನಿಗಳು ಹೇಳಿಕೊಳ್ಳುತ್ತಿರುತ್ತಾರೆ. ಅಲ್ಲದೆ, ಅವರನ್ನು ನೋಡಬೇಕು ಎಂದು ಎಷ್ಟು ವರ್ಷ ಕಾದಿದ್ದೆ ಎಂಬುದನ್ನೂ ವಿವರಿಸುತ್ತಿರುವಾಗಲೆ ಪುನೀತ್​ ಬರುತ್ತಾರೆ. ಈ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡುತ್ತಾರೆ. ಪುನೀತ್​ ಅವರನ್ನು ನೋಡಿ ಅನೇಕರು ಅಚ್ಚರಿಗೆ ಒಳಗಾಗುತ್ತಾರೆ. ಈ ವೇಳೆ ಪುನೀತ್ ಅವರೇ ಸಮಾಧಾನ ಮಾಡುವ ಕೆಲಸವನ್ನೂ ಮಾಡುತ್ತಾರೆ. ಅಪ್ಪು ಮರಣಾನಂತರ ಈ ವಿಡಿಯೋ ಈಗ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಲೋಹಿತಾಶ್ವ ಎಂದರೆ ಅಲ್ಪಾಯುಶಿ; ಪುನೀತ್​ ಹೆಸರು ಬದಲಾವಣೆಗೆ ಕಾರಣವಾಗಿತ್ತು ಈ ವಿಚಾರ

ಪುನೀತ್​ ಅಂತ್ಯಕ್ರಿಯೆ ಮರುದಿನ ಹೇಗಿದೆ ಶಿವಣ್ಣನ ದಿನಚರಿ? ನೋವು ನುಂಗಿಕೊಂಡು ಮುಂದಿನ ಹೆಜ್ಜೆ ಇಟ್ಟ ಶಿವರಾಜ್​ಕುಮಾರ್​

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್