ಪುನೀತ್ ಅಂತ್ಯಕ್ರಿಯೆ ಮರುದಿನ ಹೇಗಿದೆ ಶಿವಣ್ಣನ ದಿನಚರಿ? ನೋವು ನುಂಗಿಕೊಂಡು ಮುಂದಿನ ಹೆಜ್ಜೆ ಇಟ್ಟ ಶಿವರಾಜ್ಕುಮಾರ್
Shivarajkumar: ನಟ ಶಿವರಾಜ್ಕುಮಾರ್ ಅವರು ಸೋಮವಾರ (ನ.1) ಮುಂಜಾನೆ ಎಂದಿನಂತೆ ವಾಕಿಂಗ್ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅವರ ಜೊತೆ ಒಂದಷ್ಟು ಗೆಳೆಯರು ಸಾಥ್ ನೀಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ನಿಧನದಿಂದಾಗಿ ಶಿವರಾಜ್ಕುಮಾರ್ ಅವರು ಕುಗ್ಗಿ ಹೋಗಿದ್ದಾರೆ. ರಾಜ್ ಫ್ಯಾಮಿಲಿಯ ಹಿರಿಯಣ್ಣನಾಗಿರುವ ಅವರು ಎಲ್ಲ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಅಪ್ಪು ಮೇಲೆ ಶಿವಣ್ಣ ಅಪಾರ ಪ್ರೀತಿ, ಅಭಿಮಾನ ಇಟ್ಟುಕೊಂಡಿದ್ದರು. ಈಗ ಪುನೀತ್ ಇಲ್ಲ ಎಂಬ ನೋವನ್ನು ನುಂಗಿಕೊಂಡು ನಾವೆಲ್ಲ ಮುಂದೆ ಸಾಗಬೇಕು ಎಂದು ಅವರು ಅಂತ್ಯಕ್ರಿಯೆ ಮುಗಿದ ಬಳಿಕ ಹೇಳಿದ್ದರು. ಅದರಂತೆಯೇ ಈಗ ಅವರ ಹೊಸ ದಿನ ಆರಂಭ ಆಗಿದೆ.
ಕಂಠೀರವ ಸ್ಟುಡಿಯೋ ಆವರಣದಲ್ಲಿ ಭಾನುವಾರ (ಅ.31) ಪುನೀತ್ ರಾಜ್ಕುಮಾರ್ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು. ಸೋಮವಾರ (ನ.1) ಮುಂಜಾನೆ ಶಿವಣ್ಣ ಅವರು ನಾಗವಾರದ ಮನೆಯಿಂದ ಎಂದಿನಂತೆ ವಾಕಿಂಗ್ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅವರ ಜೊತೆ ಒಂದಷ್ಟು ಗೆಳೆಯರು ಕೂಡ ಸಾಥ್ ನೀಡಿದ್ದಾರೆ. ಆ ವಿಡಿಯೋ ಕೂಡ ಲಭ್ಯವಾಗಿದೆ. ಅನೇಕ ಸಿನಿಮಾಗಳು ‘ಹ್ಯಾಟ್ರಿಕ್ ಹೀರೋ’ ಕೈಯಲ್ಲಿವೆ. ಅವುಗಳ ಕೆಲಸಗಳಲ್ಲಿ ಅವರು ಮತ್ತೆ ತೊಡಗಿಕೊಳ್ಳಲು ಒಂದಷ್ಟು ದಿನ ಸಮಯ ಹಿಡಿಯಬಹುದು.
ಇದನ್ನೂ ಓದಿ:
Puneeth Rajkumar: ಅಶ್ಲೀಲ ಪದಗಳಿಂದ ಪುನೀತ್ಗೆ ಅವಮಾನ; ಜನರಿಗೆ ಮನುಷ್ಯತ್ವ ಇಲ್ವಾ? ಸುದೀಪ್ ಪುತ್ರಿ ಸಾನ್ವಿ ಗರಂ
ಕನ್ನಡಾಂಬೆ ಮಡಿಲಲ್ಲಿ, ಅಪ್ಪಾಜಿ ತೋಳಲ್ಲಿ ಪುನೀತ್; ಮನ ಕಲಕುತ್ತಿವೆ ಅಪ್ಪು ರೇಖಾಚಿತ್ರಗಳು
Published on: Nov 01, 2021 12:48 PM
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್ಲೈನ್ ಫಿಕ್ಸ್

