‘ಜೈಲರ್’ ಆಡಿಯೋ ಲಾಂಚ್​​ಗೆ ಹೇಗಿತ್ತು ನೋಡಿ ಶಿವಣ್ಣನ ಎಂಟ್ರಿ

|

Updated on: Jul 29, 2023 | 11:20 AM

ಜೈಲರ್ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಜುಲೈ 28ರಂದು ನಡೆದಿದೆ. ಶಿವರಾಜ್​ಕುಮಾರ್ ಮಾತನಾಡಲು ವೇದಿಕೆ ಏರುತ್ತಿದ್ದಂತೆ ಸಿಳ್ಳೆಗಳು ಬಿದ್ದವು.

ರಜನಿಕಾಂತ್ (Rajinikanth) ಅವರು ‘ಜೈಲರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 10ರಂದು ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ (Shivarajkumar) ಕೂಡ ಒಂದು ಪಾತ್ರ ಮಾಡಿದ್ದಾರೆ. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಜುಲೈ 28ರಂದು ನಡೆದಿದೆ. ಶಿವರಾಜ್​ಕುಮಾರ್ ಮಾತನಾಡಲು ವೇದಿಕೆ ಏರುತ್ತಿದ್ದಂತೆ ಸಿಳ್ಳೆಗಳು ಬಿದ್ದವು. ಶಿವಣ್ಣ ಅವರು ತಾವು ಚೆನ್ನೈನಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡರು. ಸದ್ಯ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಶಿವಣ್ಣ ಅವರ ಪಾತ್ರ ಸಿನಿಮಾದಲ್ಲಿ 10 ನಿಮಿಷ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ