‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ (Shivarajkumar) ಅವರ 125ನೇ ಸಿನಿಮಾವಾಗಿ ‘ವೇದ’ ಚಿತ್ರ ಬಿಡುಗಡೆ ಆಗುತ್ತಿದೆ. ಶುಕ್ರವಾರ (ಡಿ.23) ಅದ್ದೂರಿಯಾಗಿ ತೆರೆಗೆ ಬರುತ್ತಿರುವ ಈ ಸಿನಿಮಾ ಕುರಿತು ಶಿವಣ್ಣ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಟಿವಿ9 ನಡೆಸಿದ ವಿಶೇಷ ಸಂದರ್ಶನದಲ್ಲಿ (Shivarajkumar Interview) ಅವರು ಹಲವು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ಮಾತಾಡಿದ್ದಾರೆ. ಎ. ಹರ್ಷ ನಿರ್ದೇಶನ ಮಾಡಿರುವ ‘ವೇದ’ (Vedha Movie) ಚಿತ್ರವನ್ನು ಗೀತಾ ಶಿವರಾಜ್ಕುಮಾರ್ ನಿರ್ಮಿಸಿದ್ದಾರೆ. ಸಿನಿಮಾ ಸೆಟ್ಟೇರಿದ್ದು ಹೇಗೆ? ಶೂಟಿಂಗ್ ಹೇಗೆ ನಡೆಯಿತು? ಚಿತ್ರದಲ್ಲಿರುವ ಹೈಲೈಟ್ಸ್ ಏನು? ಇಂಥ ಅನೇಕ ವಿಚಾರಗಳ ಬಗ್ಗೆ ಈ ಸಂದರ್ಶನದಲ್ಲಿ ಶಿವಣ್ಣ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:07 pm, Thu, 22 December 22