Video: ಮಾಜಿ ಸಚಿವ ಸ್ವಾಮಿ ಪ್ರಸಾದ್​​ ಮೌರ್ಯಗೆ ಹಿಂದಿನಿಂದ ತಲೆಗೆ ಬಾರಿಸಿದ ವ್ಯಕ್ತಿ

Updated on: Aug 06, 2025 | 2:42 PM

ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರಿಗೆ ವ್ಯಕ್ತಿಯೊಬ್ಬ ಹಿಂದಿನಿಂದ ಮಾಲೆ ಹಾಕಿ, ತಲೆಗೆ ಬಾರಿಸಿರುವ ಘಟನೆ ಉತ್ತರ ಪ್ರದೇಶದ ರಾಯ್​ಬರೇಲಿಯಲ್ಲಿ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೌರ್ಯ ಅವರು ಬಂದಿದ್ದರು. ಮಾಲೆ ಹಾಕುವ ನೆಪದಲ್ಲಿ ಬಂದು ತಲೆಗೆ ಹೊಡೆದಿರುವ ಘಟನೆ ನಡೆದಿದೆ. ಘಟನೆಯ ನಂತರ, ಮೌರ್ಯ ಅವರ ಬೆಂಬಲಿಗರು ಆ ವ್ಯಕ್ತಿಯನ್ನು ಹಿಡಿದು ಥಳಿಸಿ, ರಾಯ್‌ಬರೇಲಿ ಪೊಲೀಸರಿಗೆ ಒಪ್ಪಿಸಿದರು.

ರಾಯ್​​ಬರೇಲಿ, ಆಗಸ್ಟ್ 06: ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರಿಗೆ ವ್ಯಕ್ತಿಯೊಬ್ಬ ಹಿಂದಿನಿಂದ ಮಾಲೆ ಹಾಕಿ, ತಲೆಗೆ  ಹೊಡೆದಿರುವ ಘಟನೆ ಉತ್ತರ ಪ್ರದೇಶದ ರಾಯ್​ಬರೇಲಿಯಲ್ಲಿ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೌರ್ಯ ಅವರು ಬಂದಿದ್ದರು. ಮಾಲೆ ಹಾಕುವ ನೆಪದಲ್ಲಿ ಬಂದು ತಲೆಗೆ ಹೊಡೆದಿರುವ ಘಟನೆ ನಡೆದಿದೆ. ಘಟನೆಯ ನಂತರ, ಮೌರ್ಯ ಅವರ ಬೆಂಬಲಿಗರು ಆ ವ್ಯಕ್ತಿಯನ್ನು ಹಿಡಿದು ಥಳಿಸಿ, ರಾಯ್‌ಬರೇಲಿ ಪೊಲೀಸರಿಗೆ ಒಪ್ಪಿಸಿದರು.

ಸ್ವಾಮಿ ಪ್ರಸಾದ್ ಮೌರ್ಯ ಅವರು ರಾಯ್‌ಬರೇಲಿಯ ಸಿವಿಲ್ ಲೈನ್ಸ್‌ಗೆ ಆಗಮಿಸಿದ್ದರು. ಬೆಂಬಲಿಗರು ಅವರನ್ನು ಹೂಮಾಲೆಗಳೊಂದಿಗೆ ಸ್ವಾಗತಿಸುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿ ಹಿಂದಿನಿಂದ ಅವರ ತಲೆಗೆ ಹೊಡೆದಿದ್ದಾನೆ.ಈ ಘಟನೆಗೆ ಮೌರ್ಯ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ದೂಷಿಸಿದ್ದು, ಬಿಜೆಪಿ ಸರ್ಕಾರ ಗೂಂಡಾಗಳಿಗೆ ಮುಕ್ತ ಹಸ್ತ ನೀಡಿದೆ ಎಂದು ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More