ಎಂಜಾಯ್ ಮಾಡಲು ನೀರಿಗೆ ಹಾರಿ ಒದ್ದಾಡಿ ಪ್ರಾಣ ಬಿಟ್ಟ ಗೆಳೆಯರು; ಶಾಕಿಂಗ್ ವಿಡಿಯೋ ಮೊಬೈಲ್​ನಲ್ಲಿ ಸೆರೆ

Updated on: Apr 19, 2025 | 10:13 PM

ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಾಲುವೆಗೆ ಈಜಲು 3 ಸ್ನೇಹಿತರು ಹಾರಿದ್ದಾರೆ. ಅವರಲ್ಲಿ ಇಬ್ಬರು ನೀರುಪಾಲಾದ ಘಟನೆ ನಡೆದಿದೆ. ಈ ಘಟನೆಯ ವೀಡಿಯೊವೊಂದು ಕಾಣಿಸಿಕೊಂಡಿದ್ದು, ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಹಲ್ದೌರ್ ಪ್ರದೇಶದ ಝಲ್ಹು ಕಾಲುವೆಯಲ್ಲಿ ನಡೆದಿದೆ. ವೀಡಿಯೊದಲ್ಲಿ, ಇಬ್ಬರು ಯುವಕರು ತಮ್ಮ ಜೀವಕ್ಕಾಗಿ ಹೋರಾಡುತ್ತಿರುವುದನ್ನು ಕಾಣಬಹುದು.

ಬಿಜ್ನೋರ್, ಏಪ್ರಿಲ್ 19: ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಒಂದು ದುರಂತ ಘಟನೆ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಮೂವರು ಸ್ನೇಹಿತರು ಈಜಲು ಒಟ್ಟಿಗೆ ಕಾಲುವೆಗೆ ಹಾರಿದ್ದಾರೆ. ಅವರಲ್ಲಿ ಒಬ್ಬರು ವೇಗವಾಗಿ ಕಾಲುವೆಯ ದಡವನ್ನು ತಲುಪಿದ್ದಾರೆ. ಇತರ ಇಬ್ಬರು ವೇಗವಾಗಿ ಬಂದ ನೀರಿನ ಹೊಡೆತ ತಾಳಲಾರದೆ ಕಾಲುವೆಯಿಂದ ಕೆಳಗೆ ಕೊಚ್ಚಿಹೋಗಿದ್ದಾರೆ. ದಡದಲ್ಲಿದ್ದವರು ಈ ದೃಶ್ಯವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆ ಇಬ್ಬರು ಹುಡುಗರು ಒದ್ದಾಡುತ್ತಾ ಈಜಿ ದಡಕ್ಕೆ ಬರಲು ಪ್ರಯತ್ನಿಸಿದರೂ ಅವರಿಗೆ ಸಾಧ್ಯವಾಗಿಲ್ಲ. ಈ ಘಟನೆ ಹಲ್ದೌರ್ ಪ್ರದೇಶದ ಝಲ್ಹು ಕಾಲುವೆಯಲ್ಲಿ ನಡೆದಿದೆ. ಈ ವೀಡಿಯೊದಲ್ಲಿ ಇಬ್ಬರು ಯುವಕರು ಜೀವನ್ಮರಣದ ಹೋರಾಟ ನಡೆಸುತ್ತಿರುವುದನ್ನು ಕಾಣಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 19, 2025 10:13 PM
Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More