ಇಡುಕ್ಕಿ ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್
ಕೇರಳದ ಇಡುಕ್ಕಿ ಬಸ್ ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ಕೂದಲೆಳೆ ಅಂತರದಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇಡುಕ್ಕಿ: ಕೇರಳದ ಇಡುಕ್ಕಿಯ ಕಟ್ಟಪ್ಪನ ಹೊಸ ಬಸ್ ಟರ್ಮಿನಲ್‌ನಲ್ಲಿ ಬೆಂಚ್ ಮೇಲೆ ಕುಳಿತಿದ್ದ ಯುವಕನಿಗೆ ಇಂದು ನಿಯಂತ್ರಣ ತಪ್ಪಿದ ಬಸ್ ಡಿಕ್ಕಿ ಹೊಡೆದಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಡುಕ್ಕಿಯ ಕುಮಿಲಿ ನಿವಾಸಿ ವಿಷ್ಣು ಡಿಪೋದಲ್ಲಿ ಬೆಂಚ್ ಮೇಲೆ ಕುಳಿತಿದ್ದಾಗ ಈ ಘಟನೆ ಸಂಭವಿಸಿದೆ. ಮುನ್ನಾರ್-ಕಟ್ಟಪ್ಪನ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿಯಾಮೋಲ್ ಎಂಬ ಹೆಸರಿನ ಖಾಸಗಿ ಬಸ್ ಸಮೀಪ ನಿಲ್ಲಿಸಲು ಯತ್ನಿಸುತ್ತಿದ್ದಾಗ ಅನಿರೀಕ್ಷಿತವಾಗಿ ಮುಂದಕ್ಕೆ ನುಗ್ಗಿತು. ಗೇರ್ ಹಾಳಾಗಿ ಬಸ್ ನಿಯಂತ್ರಣ ತಪ್ಪಿ, ವಿಷ್ಣು ಕುಳಿತಿದ್ದ ಸ್ಥಳಕ್ಕೆ ಅಪ್ಪಳಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us