ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!

Updated on: Nov 15, 2024 | 10:33 PM

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ವಿಚಿತ್ರವಾದ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದೇ ಬೈಕ್‌ನಲ್ಲಿ ಹಾಸಿಗೆ ಜೊತೆಗೆ ಹೊರಟಿದ್ದ 8 ಮಂದಿಯ ಕುಟುಂಬವನ್ನು ಕಂಡು ಪೊಲೀಸರೇ ಕಂಗಾಲಾಗಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಹಜಹಾನ್​ಪುರ: ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಎಂಟು ಜನರ ಇಡೀ ಕುಟುಂಬ ಒಂದೇ ಬೈಕ್​ನಲ್ಲಿ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಈ ಕುಟುಂಬವು ಒಟ್ಟಿಗೆ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದು, ತಮ್ಮ ಜೊತೆಗೆ ಗಾದಿಗಳು, ಹಾಸಿಗೆಗಳು, ಟೆಂಟ್‌ಗಳು ಮತ್ತು ಸ್ಟಿಕ್‌ಗಳು ಸೇರಿದಂತೆ ಭಾರವಾದ ಸಾಮಾನುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ದಿನೇಶ್ ಪಟೇಲ್ ನಿತ್ಯ ತಪಾಸಣೆ ನಡೆಸುತ್ತಿದ್ದರು. ಓವರ್‌ಲೋಡ್‌ ಆಗಿದ್ದ ಬೈಕ್‌ ಗಮನಿಸಿದ ಕೂಡಲೇ ಅವರು ಬೈಕ್‌ ನಿಲ್ಲಿಸಿದ್ದಾರೆ.

ಮಕ್ಕಳು ಸೇರಿದಂತೆ ಎಂಟು ಜನರು ಒಂದೇ ಬೈಕ್​ನಲ್ಲಿ ಹೋಗುತ್ತಿರುವುದನ್ನು ನೋಡಿ ಪೊಲೀಸರು ಆಘಾತ ವ್ಯಕ್ತಪಡಿಸಿದರು. ಸವಾರ ಸೇರಿದಂತೆ ಯಾರೂ ಹೆಲ್ಮೆಟ್ ಧರಿಸಿರಲಿಲ್ಲ. ಟ್ರಾಫಿಕ್ ಸುರಕ್ಷತೆಯ ಬಗ್ಗೆ ಎಚ್ಚರಿಕೆ ನೀಡಿದ ಅವರು ಬಳಿಕ ಅವರೆಲ್ಲರನ್ನು ಬಿಟ್ಟು ಕಳಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us