Video: ಅಂಗಡಿಯಲ್ಲಿ ಒಳ ಉಡುಪುಗಳನ್ನು ಕದ್ರಾ ಮಹಿಳಾ ವ್ಯಾಪಾರ ಮಂಡಳಿಯ ಅಧ್ಯಕ್ಷೆ?

Updated on: Feb 27, 2026 | 10:29 AM

ವಾರಾಣಸಿಯ ಲಾಹುರಾಬಿರ್ ಅಂಗಡಿಯಿಂದ 10 ಸಾವಿರ ರೂ. ಮೌಲ್ಯದ ಒಳಉಡುಪುಗಳು ಕಳ್ಳತನವಾಗಿವೆ. ವಾರಾಣಸಿಯ ಮಹಿಳಾ ವ್ಯಾಪಾರ ಮಂಡಳಿಯ ಅಧ್ಯಕ್ಷೆ ಸುನೀತಾ ಸೋನಿ ಸೇರಿದಂತೆ ಮೂವರು ಮಹಿಳೆಯರ ವಿರುದ್ಧ ಆರೋಪ ಕೇಳಿಬಂದಿದೆ. ಅಂಗಡಿಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಘಟನೆ ಸೆರೆಯಾಗಿದೆ. ಅಂಗಡಿಯ ಮಾಲೀಕ ಸುದೀಪ್ ಸಿಂಗ್ ಅವರು ಫೆಬ್ರವರಿ 24 ರ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಿ ದೂರು ದಾಖಲಿಸಿದ್ದಾರೆ. ಗಮನ ಬೇರೆಡೆ ಸೆಳೆಯಲು ಒಬ್ಬ ಮಹಿಳೆ ಅಂಗಡಿಯವನ ಬಳಿ ಮಾತನಾಡುತ್ತಿದ್ದಾರೆ.

ವಾರಾಣಸಿ, ಫೆಬ್ರವರಿ 27: ವಾರಾಣಸಿಯ ಲಾಹುರಾಬಿರ್ ಅಂಗಡಿಯಿಂದ 10 ಸಾವಿರ ರೂ. ಮೌಲ್ಯದ ಒಳಉಡುಪುಗಳು ಕಳ್ಳತನವಾಗಿವೆ. ವಾರಾಣಸಿಯ ಮಹಿಳಾ ವ್ಯಾಪಾರ ಮಂಡಳಿಯ ಅಧ್ಯಕ್ಷೆ ಸುನೀತಾ ಸೋನಿ ಸೇರಿದಂತೆ ಮೂವರು ಮಹಿಳೆಯರ ವಿರುದ್ಧ ಆರೋಪ ಕೇಳಿಬಂದಿದೆ. ಅಂಗಡಿಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಘಟನೆ ಸೆರೆಯಾಗಿದೆ.

ಅಂಗಡಿಯ ಮಾಲೀಕ ಸುದೀಪ್ ಸಿಂಗ್ ಅವರು ಫೆಬ್ರವರಿ 24 ರ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಿ ದೂರು ದಾಖಲಿಸಿದ್ದಾರೆ. ಗಮನ ಬೇರೆಡೆ ಸೆಳೆಯಲು ಒಬ್ಬ ಮಹಿಳೆ ಅಂಗಡಿಯವನ ಬಳಿ ಮಾತನಾಡುತ್ತಿದ್ದಾರೆ. ಇತರ ಇಬ್ಬರು ಮಹಿಳೆಯರು ತಮ್ಮ ಕೈಚೀಲಗಳಲ್ಲಿ ಒಳುಡುಪುಗಳನ್ನು ತುಂಬಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಒಬ್ಬರನ್ನು ಸುನೀತಾ ಸೋನಿ ಎಂದು ಗುರುತಿಸಲಾಗಿದ್ದು, ಅವರು ವಾರಾಣಸಿಯ ಮಹಿಳಾ ವ್ಯಾಪಾರ ಮಂಡಳಿಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಈ ಹಿಂದೆ ವಾರಾಣಸಿ ಮುನ್ಸಿಪಲ್ ಕಾರ್ಪೊರೇಷನ್‌ ರಾಯಭಾರಿಯಾಗಿ ಕೂಡ ಸೇವೆ ಸಲ್ಲಿಸಿದ್ದರು.

ದೃಶ್ಯಗಳಲ್ಲಿ ಕಂಡುಬರುವ ಇತರ ಇಬ್ಬರು ಮಹಿಳೆಯರು ಅವರ ಮಗಳು ಮತ್ತು ಅತ್ತಿಗೆ ಎಂದು ಹೇಳಲಾಗಿದೆ. ಆದರೆ ಕದ್ದಿದ್ದು ಬೇರೆ ಇಬ್ಬರು ನಾನು ಕದ್ದಿಲ್ಲ, ತಾನು ಹುಡುಕುತ್ತಿದ್ದ ವಸ್ತು ಲಭ್ಯವಿಲ್ಲದ ಕಾರಣ ತಾನು ಯಾವುದೇ ಖರೀದಿಗಳನ್ನು ಮಾಡಲಿಲ್ಲ. ಆ ಬಟ್ಟೆಯನ್ನು ವಾಪಸ್ ಕೊಡಿಸುತ್ತೇನೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Feb 27, 2026 10:29 AM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More