‘ನನಗೆ ಏರು ಧ್ವನಿಯಲ್ಲಿ ಮಾತಾಡ್ತೀರಾ’; ವಿನಯ್​ಗೆ ನಡುಕ ಹುಟ್ಟಿಸಿದ ನಟಿ ಶ್ರುತಿ

Updated on: Dec 23, 2023 | 8:27 AM

ಬಿಗ್ ಬಾಸ್​ನಲ್ಲಿ ವಿನಯ್ ಅವರು ವಾರದ ದಿನ ಒಂದು ರೀತಿ ಇದ್ದರೆ ವೀಕೆಂಡ್​ನಲ್ಲಿ ಒಂದು ತರಹ ಇರುತ್ತಾರೆ. ಈ ಪ್ರಶ್ನೆಯನ್ನು ಶ್ರುತಿ ಮನೆಯವರಿಗೆ ಕೇಳಿದ್ದಾರೆ.

ಈ ವಾರದ ವೀಕೆಂಡ್ ಎಪಿಸೋಡ್​ಗೆ ಕಿಚ್ಚ ಸುದೀಪ್ ಅವರು ಗೈರಾಗುತ್ತಿದ್ದಾರೆ. ಇದಕ್ಕೆ ಕಾರಣ ಕೆಸಿಸಿ. ಅವರು ಕ್ರಿಕೆಟ್ ಮೈದಾನದಲ್ಲಿ ಇರುವುದರಿಂದ ಬಿಗ್ ಬಾಸ್​ ವೇದಿಕೆ ಏರಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ನ್ಯಾಯಲಯ ಮಾಡಲಾಗಿದೆ. ಈ ನ್ಯಾಯಾಲಯಕ್ಕೆ ಜಡ್ಜ್ ಆಗಿ ನಟಿ ಶ್ರುತಿ ಬಂದಿದ್ದಾರೆ. ಬಿಗ್ ಬಾಸ್​ನಲ್ಲಿ ವಿನಯ್ (Vinay Gowda) ಅವರು ವಾರದ ದಿನ ಒಂದು ರೀತಿ ಇದ್ದರೆ ವೀಕೆಂಡ್​ನಲ್ಲಿ ಒಂದು ತರಹ ಇರುತ್ತಾರೆ. ಈ ಪ್ರಶ್ನೆಯನ್ನು ಶ್ರುತಿ ಮನೆಯವರಿಗೆ ಕೇಳಿದ್ದಾರೆ. ನಮ್ರತಾ, ಸಂಗೀತಾ ಸೇರಿ ಅನೇಕರು ಇದನ್ನು ಒಪ್ಪಿದ್ದಾರೆ. ವಿನಯ್ ಸಿಟ್ಟಲ್ಲಿ ಕೂಗಾಡಿದ್ದಾರೆ. ‘ಜಡ್ಜ್​​ಗೆ ಏರುಧ್ವನಿಯಲ್ಲಿ ಮಾತನಾಡುತ್ತೀರಾ’ ಎಂದು ಶ್ರುತಿ ವಿನಯ್​ಗೆ ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More