ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ಒಂದೇ ಹೆಲಿಕಾಪ್ಟರಲ್ಲಿ ಬಂದರೂ ಇಳಿದಿದ್ದು ಮಾತ್ರೆ ಬೇರೆ ಬೇರೆ ಎಕ್ಸಿಟ್ಗಳಿಂದ!
ಚಾಪರ್ ಲ್ಯಾಂಡ್ ಆದ ಬಳಿಕ ಸಿದ್ದರಾಮಯ್ಯ ಅದರ ಬಲಭಾಗದಿಂದ ಕೆಳಗಿಳಿದರೆ ಶಿವಕುಮಾರ ಎಡಭಾಗದಿಂದ ಇಳಿದರು.
ಕೊಪ್ಪಳ: ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ (DK Shivakumar) ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ನಡೆದಿರುವ ಪೈಪೋಟಿ ಎಲ್ಲರಿಗೂ ಗೊತ್ತಿರುವಂಥದ್ದೇ. ಸಾಮಾನ್ಯವಾಗಿ ಅವರಿಬ್ಬರು ಒಂದೇ ಕಾರಿನಲ್ಲಿ ಪ್ರಯಾಣಿಸುವುದಿಲ್ಲ. ಆದರೆ ಕೊಪ್ಪಳದ ಕುಷ್ಟಗಿಯಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಪಕ್ಷದ ಸಮಾವೇಶಕ್ಕೆ ಅವರು ಒಂದೇ ಹೆಲಿಕಾಪ್ಟರ್ ನಲ್ಲಿ (helicopter) ಆಗಮಿಸಿದರು. ಆದರೆ ಚಾಪರ್ ಲ್ಯಾಂಡ್ ಆದ ಬಳಿಕ ಸಿದ್ದರಾಮಯ್ಯ ಅದರ ಬಲಭಾಗದಿಂದ ಕೆಳಗಿಳಿದರೆ ಶಿವಕುಮಾರ ಎಡಭಾಗದಿಂದ ಇಳಿದರು. ಹಾಗೆಯೇ ಪಕ್ಷದ ಸ್ಥಳೀಯ ಕಾರ್ಯಕರ್ತರು ಸಹ ಎರಡು ಭಾಗಗಳಲ್ಲಿ ವಿಂಗಡಣೆಯಾದರು!
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ