Assembly Polls: ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ ಸಿದ್ದರಾಮಯ್ಯ, ಕೆಹೆಚ್ ಮುನಿಯಪ್ಪರತ್ತ ನೋಡಿ ಮುಗುಳ್ನಕ್ಕರು!
ತಾವು ಸಲ್ಲಿಸಿರುವ ಅರ್ಜಿಯಲ್ಲಿ ಸಹ ಹೈಕಮಾಂಡ್ ಸೂಚಿಸುವ ಕ್ಷೇತ್ರ ಅಂತ ನಮೂದಿಸಿರುವುದಾಗಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
ಬೆಳಗಾವಿ: ಫಾರ್ ಎ ಚೇಂಜ್ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ (KH Muniyappa) ಜೊತೆಯಲ್ಲಿ ಕಂಡರು ಮತ್ತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ ಪರಸ್ಪರ ಮುಖ ನೋಡಿಕೊಂಡು ಮುಗುಳ್ನಗುತ್ತಿದ್ದರು. ಕಳೆದ ವಾರ ಕಾಂಗ್ರೆಸ್ ಸಿಇಸಿ ಸಭೆ (CEC meeting) ನಡೆಯುವ ಮೊದಲು ಕೋಲಾರದಿಂದ ಸ್ಪರ್ಧಿಸುವುದು ನಿಶ್ಚಿತ ಎನ್ನುತ್ತಿದ್ದ ಸಿದ್ದರಾಮಯ್ಯ ಈಗ ಪಕ್ಷದ ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ. ತಾವು ಸಲ್ಲಿಸಿರುವ ಅರ್ಜಿಯಲ್ಲಿ ಸಹ ಹೈಕಮಾಂಡ್ ಸೂಚಿಸುವ ಕ್ಷೇತ್ರ ಅಂತ ನಮೂದಿಸಿರುವುದಾಗಿ ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 20, 2023 12:46 PM