Karnataka Assembly Polls: ಕೋಲಾರ ಟಿಕೆಟ್ ನೀಡಬೇಕೆಂದು ರಂದೀಪ್ ಸುರ್ಜೆವಾಲಾ ಮುಂದೆ ಗಲಾಟೆ ಮಾಡಿದ ಕಾರ್ಯಕರ್ತರನ್ನು ಗದರಿದ ಸಿದ್ದರಾಮಯ್ಯ
ಸುರ್ಜೆವಾಲಾ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ, ಅವರ ಮುಂದೆ ಹೀಗೆ ವರ್ತಿಸುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಕೋಪದಿಂದ ಹೇಳಿದರು
ಕೋಲಾರ: ಕಾಂಗ್ರೆಸ್ ಪಕ್ಷ ನಗರದಲ್ಲಿ ಇಂದು ನಡೆಸಿದ ಸಭೆ ಗಲಾಟೆಮಯವಾಗಿತ್ತು. ಅದಕ್ಕೆ ಕಾರಣವೂ ಇದೆ. ಸಿದ್ದರಾಮಯ್ಯ (Siddaramaiah) ಕೋಲಾರದಿಂದ ಸ್ಪರ್ಧಿಸಲಿದ್ದಾರೆ ಎಂದು ರಾಜ್ಯದಾದ್ಯಂತ ಟಾಂ ಟಾಂ ಅಗಿದ್ದರಿಂದ ಸಹಜವಾಗೇ ಕೋಲಾರ ಕಾಂಗ್ರೆಸ್ ಕಾರ್ಯಕರ್ತರು ಉತ್ಸುಕರಾಗಿದ್ದರು. ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿರುವುದು ಗೊತ್ತಾದ ಬಳಿಕ ಅವರು ಅಸಮಧಾನಗೊಂಡಿದ್ದಾರೆ. ಹಾಗಾಗಿ, ಇಂದು ಸಿದ್ದರಾಮಯ್ಯ, ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ (Randeep Surjewala), ಡಿಕೆ ಶಿವಕುಮಾರ (DK Shivakumar) ಆಗಮಿಸಿದ್ದಾಗ ಕಾರ್ಯಕರ್ತರು ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯಗೆ ಕೋಲಾರ ಟಿಕೆಟ್ ಕೊಡಿ ಅಂತ ಸುರ್ಜೆವಾಲ ಎದುರು ಹಟಕ್ಕೆ ಬಿದ್ದರು. ಆಗಲೇ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಂಡು ಕಾರ್ಯಕರ್ತರನ್ನು ಗದರಿದರು. ಸುರ್ಜೆವಾಲಾ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ, ಅವರ ಮುಂದೆ ಹೀಗೆ ವರ್ತಿಸುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಕೋಪದಿಂದ ಹೇಳಿದರು
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ