Bagalkot: ಪಿಂಚಣಿಗಾಗಿ ಅಲೆದಾಡಿದರೂ ಸಿಗದೆ ಹೋದಾಗ ಅತ್ಮಹತ್ಯೆ ಮಾಡಿಕೊಂಡ ಶಿಕ್ಷಕನ ಮನೆಗೆ ತೆರಳಿ ಧನಸಹಾಯ ಮಾಡಿದ ಸಿದ್ದರಾಮಯ್ಯ
ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಶಿಕ್ಷಕರ ಮಗನಿಗೆ ನೌಕರಿ ಮತ್ತು ಬೇರೆ ಸಹಾಯ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.
ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹಿಂಜರಿಯರು. ಅಂಥದೊಂದು ಪ್ರಸಂಗ ಇವತ್ತು ಅವರ ಬಾದಾಮಿ (Badami) ಕ್ಷೇತ್ರದ ಪಟ್ಟದಕಲ್ಲುನಲ್ಲಿ ನಡೆಯಿತು. ಇಲ್ಲಿಯ ನಿವೃತ್ತ ಶಿಕ್ಷಕರಾಗಿದ್ದ ಸಿದ್ದಯ್ಯ ಹಿರೇಮಠ (Siddaiah Hiremath) ಎನ್ನುವವರು ತಮ್ಮ ಪಿಂಚಣಿಗಾಗಿ ಪ್ರತಿಭಟನೆ ನಡೆಸಿ ಅದು ಸಿಗದೇ ಹೋದಾಗ ಖಿನ್ನತೆ ಮತ್ತು ಹತಾಷೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಮೃತ ಶಿಕ್ಷಕರ ಮನೆಗೆ ತೆರಳಿ ಕುಟುಂಬದ ಸದಸ್ಯರನ್ನು ಸಂತೈಸಿದ ಸಿದ್ದರಾಮಯ್ಯ ರೂ 2 ಲಕ್ಷ ಧನಸಹಾಯ ಸಹ ಮಾಡಿದರು. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಶಿಕ್ಷಕರ ಮಗನಿಗೆ ನೌಕರಿ ಮತ್ತು ಬೇರೆ ಸಹಾಯ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos