ಮಂಡ್ಯದ ಐಬಿಯಲ್ಲಿ ಕುಳಿತು ಸ್ಥಳೀಯ ನಾಯಕರನ್ನು ತಮ್ಮ 75ನೇ ಹುಟ್ಟುಹಬ್ಬಕ್ಕೆ ಆಹ್ವಾನಿಸಿದರು ಸಿದ್ದರಾಮಯ್ಯ!
ಸಿದ್ದರಾಮಯ್ಯನವರ ಜೊತೆ ಮಾಜಿ ಸಚಿವ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಜೊತೆ ಪಕ್ಷದ ನೂರಾರು ಕಾರ್ಯಕರ್ತರಿದ್ದರು.
ಮಂಡ್ಯ: ಮೊದಮೊದಲಿಗೆ ತಮ್ಮ 75 ನೇ ಹುಟ್ಟುಹಬ್ಬವನ್ನು ಅಷ್ಟಾಗಿ ಒಲವು ತೋರದಿದ್ದ ಸಿದ್ದರಾಮಯ್ಯನವರು ಈಗ ಅದಕ್ಕಾಗಿ ಸಂಪೂರ್ಣವಾಗಿ ತಯಾರಾಗಿದ್ದಾರೆ ಮತ್ತು ಉತ್ಸವದ ಬಗ್ಗೆ ರೋಮಾಂಚಿತರೂ ಆಗಿರುವಂತಿದೆ. ಸೋಮವಾರ ಮಂಡ್ಯ ನಗರದಲ್ಲಿದ್ದ ವಿರೋಧ ಪಕ್ಷ ನಾಯಕ ಅಲ್ಲಿನ ಐಬಿಯಲ್ಲಿ ಕುಳಿತು ಸ್ಥಳೀಯ ನಾಯಕರಿಗೆ ಹುಟ್ಟುಹಬ್ಬಕ್ಕೆ ಆಹ್ವಾನಿಸಿದರು. ಸಿದ್ದರಾಮಯ್ಯನವರ ಜೊತೆ ಮಾಜಿ ಸಚಿವ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಜೊತೆ ಪಕ್ಷದ ನೂರಾರು ಕಾರ್ಯಕರ್ತರಿದ್ದರು.