ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಊಟಕ್ಕೆ ಮನಸೋತ ಸಿದ್ಧರಾಮಯ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Feb 23, 2023 | 10:47 PM

ಮಾಂಸಾಹಾರ ಇಷ್ಟ ಪಡುವ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಶೈಲಿಯ ಊಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಪ್ಪಟ ಶಾಖಾಹಾರಿ ಊಟಕ್ಕೆ ಮನಸೋತ್ತಿದ್ದಾರೆ.  

ವಿಜಯಪುರ: ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿಯೊಂದು ಪಕ್ಷಗಳು ಮತದಾರರನ್ನು ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ. ಪ್ರಜಾಧ್ವನಿ ಯಾತ್ರೆ ಮೂಲಕ ಕಾಂಗ್ರೆಸ್​ ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಅದೇ ರೀತಿಯಾಗಿ ಇಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿಜಯಪುರಕ್ಕೆ ಭೇಟಿ ನೀಡಿದ್ದರು. ಬಬಲೇಶ್ವರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ವಿ.ಎಸ್ ಪಾಟೀಲ್ ಅವರ ನಿವಾಸದಲ್ಲಿ ಜವಾರಿ ಊಟ ಸವಿದರು. ಜೋಳದ ಖಡಕ್ ರೊಟ್ಟಿ, ಸಜ್ಜಿ ರೊಟ್ಟಿ, ಬಿಸಿ ಜೋಳದ ರೊಟ್ಟಿ, ಚಪಾತಿ, ಜೋಳದ ಕಡಬು, ಎಣಗಾಯಿ ಪಲ್ಯ, ಕಾಳು ಪಲ್ಯ, ಕೆಂಪು ಮೆಣಸಿನಕಾಯಿ ಚಟ್ನಿ, ಮೊಸರು, ಮಜ್ಜಿಗೆ, ಶೆಂಗಾ ಹಿಂಡಿ, ಮಾವಿನಕಾಯಿ ಉಪ್ಪಿನಕಾಯಿ, ಮಾದಲಿ, ಶೆಂಗಾ ಹೋಳಿಗೆ, ಪ್ರೂಟ್ ಸಲಾಡ್ ಸೇವಿಸಿದರು. ಆದರೆ ಹೆಚ್ಚಾಗಿ ಮಾಂಸಾಹಾರ ಇಷ್ಟ ಪಡುವ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಶೈಲಿಯ ಊಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಪ್ಪಟ ಶಾಖಾಹಾರಿ ಊಟಕ್ಕೆ ಮನಸೋತ್ತಿದ್ದಾರೆ.

Published on: Feb 23, 2023 08:48 PM