Viral Audio; ಪ್ರಜಾದ್ವನಿ ಯಾತ್ರೆಗೆ ಜನ ಸೇರಿಸಲು ಹಣ ನೀಡಿ ಸಿದ್ದರಾಮಯ್ಯ ಹೇಳಿದ್ದಾರೆನ್ನುವುದು ಶುದ್ಧ ಸುಳ್ಳು: ಬಿಕೆ ಹರಿಪ್ರಸಾದ್
ಜನಸ್ತೋಮವನ್ನು ನೋಡಿ ಕಂಗಾಲಾಗುತ್ತಿರುವ ಬಿಜೆಪಿ ಸುಳ್ಳು ವದಂತಿಗಳನ್ನು ಹಬ್ಬುತ್ತಿದೆ ಎಂದು ಹರಿಪ್ರಸಾದ್ ಹೇಳಿದರು.
ಮಂಗಳೂರು: ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಲು ಜನರಿಗೆ ತಲಾ ರೂ. 500 ಕೊಟ್ಟು ಕರೆತರುವಂತೆ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ ಅಂತ ಅರೋಪಿಸಲಾಗುತ್ತಿರುವ ಆಡಿಯೋವೊಂದು ವೈರಲ್ ಅಗಿದ್ದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ (BK Hari Prasad) ಅದರ ಬಗ್ಗೆ ಮಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಣಕೊಟ್ಟು ಜನರನ್ನು ಸೇರಿಸುವ ದುಸ್ಥಿತಿ ಸಿದ್ದರಾಮಯ್ಯನವರಿಗಾಗಲೀ, ಕಾಂಗ್ರೆಸ್ ಪಕ್ಷಕ್ಕಾಗಲೀ ಬಂದಿಲ್ಲ. ಅವರು ಹೋದೆಡೆಯೆಲ್ಲ ಜನ ಮುಕ್ಕುತ್ತಾರೆ, ಪ್ರಜಾಧ್ವನಿಯಾತ್ರೆ (Prajadhvani Yatre), ಅವರ ಹುಟ್ಟುಹಬ್ಬ, ಮೇಕೆದಾಟು ಪಾದಯಾತ್ರೆ, ಕಾಂಗ್ರೆಸ್ ಪಕ್ಷ ಆಚರಿಸಿದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಇನ್ನೂ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಜನ ಸ್ವಯಂ ಪ್ರೇರಿತರಾಗಿ ಸೇರಿದ್ದಾರೆ, ಜನಸ್ತೋಮವನ್ನು ನೋಡಿ ಕಂಗಾಲಾಗುತ್ತಿರುವ ಬಿಜೆಪಿ ಸುಳ್ಳು ವದಂತಿಗಳನ್ನು ಹಬ್ಬುತ್ತಿದೆ ಎಂದು ಹರಿಪ್ರಸಾದ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ