ಧ್ರುವನಾರಾಯಣರ ಮನೆ ತಲುಪಿ ಅಗಲಿದ ನಾಯಕನ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು
ಧ್ರುವನಾರಾಯಣ ಅವರ ಮಗ ಮತ್ತು ಪತ್ನಿಯೊಂದಿಗೆ ಸಿದ್ದರಾಮಯ್ಯ ಮಾತಾಡಿದರು. ವಿರೋಧ ಪಕ್ಷದ ನಾಯಕನೊಂದಿಗೆ ಸಲೀಂ ಅಹ್ಮದ್ ಮತ್ತು ಅವರ ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಇದ್ದರು.
ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ (R Dhruvanarayana) ಅವರ ಸಾವಿಗೆ ಬೆಳಗ್ಗೆ ದಾವಣಗೆರೆಯಲ್ಲಿ ಶೋಕ ವ್ಯಕ್ತಪಪಡಿಸಿದ ಸಿದ್ದರಾಮಯ್ಯ (Siddaramaiah) ಮಧ್ಯಾಹ್ನದ ಹೊತ್ತಿಗೆ ಮೈಸೂರಲ್ಲಿರುವ ಮೃತರ ಮನೆಗೆ ತಲುಪಿ ಅಂತಿಮ ದರ್ಶನ ಪಡೆದರು. ನಂತರ ಸಿದ್ದರಾಮಯ್ಯ ಕುಟುಂಬದ ಸದಸ್ಯರ ಜೊತೆ ಕೂತು ಮಾತಾಡುತ್ತಾ ಅವರಿಗೆ ಸಾಂತ್ವನ ಹೇಳಿದರು. ವಿಡಿಯೋದಲ್ಲಿ ಧ್ರುವನಾರಾಯಣ ಅವರ ಮಗ ಮತ್ತು ಪತ್ನಿಯೊಂದಿಗೆ ಸಿದ್ದರಾಮಯ್ಯ ಮಾತಾಡುತ್ತಿರವುದನ್ನು ಗಮನಿಸಬಹುದು. ವಿರೋಧ ಪಕ್ಷದ ನಾಯಕನೊಂದಿಗೆ ಸಲೀಂ ಅಹ್ಮದ್ (Salim Ahmed) ಮತ್ತು ಅವರ ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಇದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ