ಸಚಿವ ಅಶೋಕ ಮಾಡಿದ್ದೀರಿ ಅಂತ ಹೇಳಿದಾಗ ಮಾಡಿದ್ದೀವಿ ಅಂತ್ಹೇಳಿ ಅಂತ ತಿದ್ದಿದರು ವಿಪಕ್ಷ ನಾಯಕ ಸಿದ್ದರಾಮಯ್ಯ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 15, 2022 | 2:31 PM

ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಎದ್ದುನಿಂತು ಕಂದಾಯ ಸಚಿವರ ಮಾತಿನಿಂದ ಆಗುವ ಅಪಾರ್ಥಗಳನ್ನು ವಿವರಿಸಿದರು.

ಬೆಂಗಳೂರು: ಕಂದಾಯ ಸಚಿವ ಆರ್ ಅಶೋಕ ಅವರು ಮಾತಾಡುವ ರೀತಿಯೇ ಹಾಗೆ. ಹೋಗಿದ್ದೀವಿ ಅನ್ನೋದಕ್ಕೆ ಹೋಗಿದ್ದೀರಿ, ಬಂದಿದ್ದೀವಿ ಅನ್ನಲು ಬಂದಿದ್ದೀರಿ, ನೋಡಿದ್ದೀವಿಗೆ ನೋಡಿದ್ದೀರಿ, ಮಾಡಿದ್ದೀವಿ ಅನ್ನಲು ಮಾಡಿದ್ದೀರಿ ಅನ್ನುತ್ತಾರೆ. ಭಾಷೆಯಲ್ಲಿ ಯಡವಟ್ಟಾದರೆ ಕೂಡಲೇ ಕಾಲೆಳೆಯುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಸದನದಲ್ಲಿ ಅದನ್ನೇ ಮಾಡಿದಾಗ, ಸಚಿವರು ಇದು ಬೆಂಗಳೂರು ಭಾಷೆ ಅಂತ ಸಮರ್ಥಸಿಕೊಳ್ಳಲು ಪ್ರಯತ್ನಿಸಿದರು. ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಎದ್ದುನಿಂತು ಕಂದಾಯ ಸಚಿವರ ಮಾತಿನಿಂದ ಆಗುವ ಅಪಾರ್ಥಗಳನ್ನು ವಿವರಿಸಿದರು.